ಭಾರತ ವಿರುದ್ಧದ ಸರಣಿಗೂ ಮುನ್ನ ಆಸಿಸ್‌ಗೆ ಭಾರಿ ಹಿನ್ನಡೆ!

By Web DeskFirst Published Nov 20, 2018, 11:53 AM IST
Highlights

ಭಾರತ ವಿರುದ್ದ ಸರಣಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡುತ್ತಿರುವ ಆಸ್ಟ್ರೇಲಿಯಾಗೆ ಭಾರಿ ಹಿನ್ನೆಡೆಯಾಗಿದೆ. ಸರಣಿ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರ ಆಸಿಸ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
 

ಮೆಲ್ಬೋರ್ನ್(ನ.20): ಭಾರತ ವಿರುದ್ಧದ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ  ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬ್ಯಾನ್ ತೆರವುಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಿದೆ.

ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೊನ್ ಬೆನ್‌ಕ್ರಾಫ್ಟ್ ನಿಷೇಧಕ್ಕೊಳಗಾಗಿದ್ದರು. ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧದ ಶಿಕ್ಷೆ ಅನುಭವಿಸಿದರೆ, ಬೆನ್‌ಕ್ರಾಫ್ಟ್ 9 ತಿಂಗಳ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

ಭಾರತ ವಿರುದ್ದದ ಸರಣಿಗೂ ಮುನ್ನ ಕ್ರಿಕೆಟರ್ಸ್ ಆಸೋಸಿಯೇಶನ್ ನಿಷೇಧ ಹಿಂಪಡೆಯಲು ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿತ್ತು. ಮನವಿಯನ್ನ ಗಂಭೀರವಾಗಿ  ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಬ್ಯಾನ್ ಸಭೆ ನಡೆಸಿತ್ತು.  ಇದೀಗ  ನಿಷೇಧ ತೆರೆವುಗೊಳಿಸಲು ಸಾಧ್ಯವಿಲ್ಲ ಎಂದಿದೆ.

ಸ್ಮಿತ್ ಹಾಗೂ ವಾರ್ನರ್ ನಿಷೇಧ ಶಿಕ್ಷೆ ಮಾರ್ಚ್ 2019ರಂದು ಅಂತ್ಯವಾಗಲಿದೆ. ಹೀಗಾಗಿ ಭಾರತ  ವಿರುದ್ದದ ಸರಣಿಗೆ ಅವಕಾಶವಿಲ್ಲ. ಆದರೆ ಐಪಿಎಲ್ ಹಾಗೂ 2019ರ ವಿಶ್ವಕಪ್ ಟೂರ್ನಿ ಆಡೋ ಸಾಧ್ಯತೆ ಹೆಚ್ಚಿದೆ.

click me!