
ಅಮೇರಿಕಾ(ಜು.17): ಎಂ ಎಸ್ ಧೋನಿ ಕ್ರಿಕೆಟ್‌ಗೆ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ, ಇದೀಗ ಧೋನಿ ಜರ್ಸಿ ಹರಾಜು ನಡೆಯಲಿದೆ. ಎಂ ಎಸ್ ಧೋನಿ ನಂಬರ್ 7 ಜರ್ಸಿ ಇದೇ ಅಗಸ್ಟ್ 9ರಂದು ಹರಾಜಾಗಲಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎಂ ಎಸ್ ಧೋನಿ ಬ್ಯಾಟಿಂಗ್‌ಗೆ ಟೀಕೆ ವ್ಯಕ್ತವಾಗಿದೆ. ಧೋನಿ ಫಾರ್ಮ್ ಕಳೆದುಕೊಂಡಿದ್ದಾರೆ ಅನ್ನೋ ಮಾತುಗಳು ಬೆನ್ನಲ್ಲೇ, ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ ಅನ್ನೋ ಸುದ್ದಿಗಳು ಹರಡಿದೆ. ಆದರೆ ಬಿಸಿಸಿಐ ಅಥವಾ ಧೋನಿ ಈ ಕುರಿತು ಯಾವುದೇ ಸ್ಪಷ್ಠನೆ ನೀಡಿಲ್ಲ. ಆದರೆ ಧೋನಿ ಜರ್ಸಿ ಹರಾಜು ಮಾತ್ರ ಸತ್ಯ.
ಇದನ್ನು ಓದಿ: ಕ್ರಿಕೆಟ್‌ನಿಂದ ನಿವೃತ್ತಿಗೆ ಸಜ್ಜಾದ್ರಾ ಎಂ ಎಸ್ ಧೋನಿ ?
ಎಂ ಎಸ್ ಧೋನಿ ಇತ್ತೀಚೆಗೆ ಸ್ನಿಕರ್ ಚಾಕಲೇಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹಿರಾತಿನಲ್ಲಿ ಧೋನಿ ತಮ್ಮ ನಂಬರ್ 7 ಜರ್ಸಿ ಹಾಗೂ ಸೈನಿಕನ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಜಾಹೀರಾತಿನಲ್ಲಿ ಧೋನಿ ಬಳಸಿದ ಜರ್ಸಿ ಹಾಗೂ ಸೈನಿಕನ ಉಡುಪನ್ನ ಹರಾಜು ಹಾಕಲು ನಿರ್ಧರಿಸಲಾಗಿದೆ. ಸೈನಿಕರ ಉಡುಪಿನಲ್ಲಿ ಧೋನಿ ಹಸ್ತಾಕ್ಷರ ಇರಲಿದೆ.
ಇದನ್ನು ಓದಿ: ಅಭಿಮಾನಿಗೆ ಎಂ ಎಸ್ ಧೋನಿ ಕೀಪಿಂಗ್ ಗ್ಲೌಸ್ ಗಿಫ್ಟ್ ನೀಡಿದ್ದೇಕೆ?
ಈ ಹರಾಜಿನಿಂದ ಬರೋ ಹಣ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಬಳಲಾಗುವುದು. ಹರಾಜಿನಿಂದ ಬರೋ ಹಣ ಅಮೇರಿಕಾದ ಲೆಕುಮಿಯಾ ಲೆಂಫೋಮಾ ಫೌಂಡೇಶನ್ ಸೇರಲಿದೆ. ಈ ಮೂಲಕ ಭಾರತದಲ್ಲಿ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಬಳಸಲು ನಿರ್ದರಿಸಲಾಗಿದೆ. 30 ಸಾವಿರ ರೂಪಾಯಿ ಕಡಿಮೆ ಆದಾಯವಿರೋ ಕುಟುಂಬದ ಕ್ಯಾನ್ಸರ್ ಪೀಡಿತರಿಗೆ ಈ ಹಣ ಬಳಸಲು ನಿರ್ಧರಿಸಲಾಗಿದೆ.
ಸಾಲ್ಟ್ ಸ್ಕೌಟ್ ಹರಾಜಿನ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಆನ್ ಲೈನ್ ಮೂಲಕ ಬಿಡ್ಡಿಂಗ್ ಕರೆಯಲಾಗಿದೆ. ಆಸಕ್ತ ಅಭಿಮಾನಿಗಳು ಈಗಲೇ ಅರ್ಜಿ ಹಾಕಿ ಹರಾಜಿನಲ್ಲಿ ಪಾಲ್ಗೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.