ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್‌!

By Kannadaprabha News  |  First Published Sep 22, 2019, 1:09 PM IST

2019ರ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನ 86 ಕೆ.ಜಿ ವಿಭಾ​ಗದಲ್ಲಿ ದೀಪಕ್‌ ಪೂನಿಯಾ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಮೂಲಕ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪಟು ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ದೀಪಕ್ ಚಿನ್ನ ಗೆದ್ದು ಬರಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಕಜಕಸ್ತಾನ(ಸೆ.22): ಹಾಲಿ ಜೂನಿಯರ್‌ ವಿಶ್ವ ಚಾಂಪಿಯನ್‌ ದೀಪಕ್‌ ಪೂನಿಯಾ, 2019ರ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನ 86 ಕೆ.ಜಿ ವಿಭಾ​ಗದಲ್ಲಿ ಫೈನಲ್‌ ಪ್ರವೇ​ಶಿ​ಸಿದ್ದು, ಈ ಆವೃ​ತ್ತಿ​ಯಲ್ಲಿ ಚಿನ್ನದ ಪದಕದ ಸುತ್ತಿ​ಗೇ​ರಿದ ಮೊದಲ ಭಾರ​ತೀಯ ಎನಿ​ಸಿ​ಕೊಂಡಿ​ದ್ದಾರೆ. ಜತೆಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 4ನೇ ಭಾರ​ತೀಯ ಕುಸ್ತಿ​ಪಟು ಎನ್ನುವ ಹಿರಿಮೆಗೂ ಪಾತ್ರ​ರಾ​ಗಿ​ದ್ದಾರೆ. ಕಳೆದ ತಿಂಗಳಷ್ಟೇ ಎಸ್ಟೋ​ನಿ​ಯಾ​ದಲ್ಲಿ ನಡೆ​ದಿದ್ದ ಕಿರಿ​ಯರ ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ದೀಪಕ್‌ ಚಿನ್ನ ಜಯಿ​ಸಿ​ದ್ದರು.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗದ್ದ ಮೊದಲ ಭಾರತೀಯ ಅಮಿತ್!

Tap to resize

Latest Videos

ಶುಕ್ರ​ವಾರ ನಡೆದ ಸೆಮಿಫೈನಲ್‌ನಲ್ಲಿ ದೀಪಕ್‌, ಸ್ವಿಜರ್‌ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ರನ್ನು 8-2 ಅಂತರದಿಂದ ಸೋಲಿಸಿ ಫೈನಲ್‌ಗೇರಿ​ದರು. ಭಾನು​ವಾರ ನಡೆ​ಯುವ ಫೈನಲ್‌ನಲ್ಲಿ 20 ವರ್ಷದ ದೀಪಕ್‌, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಇರಾನ್‌ನ ಹಸ್ಸನ್‌ ಯಾಜ್ದಾನಿ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕೊಲಂಬಿಯಾದ ಕಾರ್ಲೊಸ್‌ ವಿರುದ್ಧ 7-6ರಲ್ಲಿ ಜಯ ಗಳಿಸಿ ದೀಪಕ್‌ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದರು.

ಟೀಂ ಇಂಡಿಯಾ ಬೆಂಗಳೂರಲ್ಲಿ ಟಿ20 ಸರಣಿ ಗೆಲ್ಲುತ್ತಾ..?

ರಾಹುಲ್‌ಗೆ ಕಂಚು?: ಒಲಿಂಪಿಕ್‌ ವಿಭಾ​ಗವಲ್ಲದ 61 ಕೆ.ಜಿ ಸ್ಪರ್ಧೆಯ ಕಂಚಿನ ಪದ​ಕದ ಪಂದ್ಯಕ್ಕೆ ರಾಹುಲ್‌ ಅವಾರೆ ಅರ್ಹತೆ ಪಡೆ​ದಿ​ದ್ದಾರೆ. ಈ ಆವೃ​ತ್ತಿ​ಯ​ಲ್ಲಿ ಈಗಾ​ಗಲೇ 3 ಕಂಚು ಗೆದ್ದಿ​ರು​ವ ಭಾರ​ತಕ್ಕೆ, ದೀಪಕ್‌ ಚಿನ್ನ ಇಲ್ಲವೇ ಬೆಳ್ಳಿ ಗೆದ್ದು​ಕೊ​ಡ​ಲಿ​ದ್ದಾರೆ. 2013ರ ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಭಾರತ 3 ಪದಕ ಜಯಿ​ಸಿದ್ದು ಈ ವರೆ​ಗಿನ ಶ್ರೇಷ್ಠ ಸಾಧನೆಯಾಗಿತ್ತು. ಭಾರ​ತಕ್ಕೆ ಈಗಾ​ಗಲೇ 4ನೇ ಪದಕ ಖಚಿತವಾಗಿ​ದ್ದು, ರಾಹುಲ್‌ ಗೆದ್ದರೆ ಒಟ್ಟು 5 ಪದ​ಕ​ಗ​ಳೊಂದಿಗೆ ಹಿಂದಿ​ರು​ಗ​ಲಿದೆ.
 

click me!