ಸಚಿನ್ 100 ಶತಕ ದಾಖಲೆಯ ಮುರಿಯಲಿದ್ದಾರೆ ಕೊಹ್ಲಿ: ಅಜರ್!

By Web DeskFirst Published 16, Jan 2019, 12:06 PM IST
Highlights

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟೀಯ ಶತಕ ದಾಖಲೆಯನ್ನ ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ ಎಂದು ಅಜರ್ ಹೇಳಿದ್ದಾರೆ. ಅಜರುದ್ದೀನ್ ಈ ಮಾತು ಹೇಳಲು ಕಾರಣವೇನು? ಇಲ್ಲಿದೆ ವಿವರ.
 

ಮುಂಬೈ(ಜ.16): ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ 39ನೇ ಏಕದಿನ ಶತಕ  ಪೂರೈಸಿದ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ಸರಣಿಯಲ್ಲಿ ಶತಕದ ಮಳೆ ಸುರಿಸುವ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸುವ ಸಾಮರ್ಥ್ಯವಿದೆ ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.

ಇದನ್ನೂ ಓದಿ: ಚಹಾಲ್ ಟಿವಿಯಲ್ಲಿ ವಿರಾಟ್ ಕೊಹ್ಲಿ ಫನ್ನಿ ಮಾತು!

ಕೊಹ್ಲಿ ಫಿಟ್ನೆಸ್ ಕಾಪಾಡಿಕೊಂಡರೆ ದಿಗ್ಗಜ ಸಚಿನ್ ತೆಂಡೂಲ್ಕರ್ 100 ಶತಕ ದಾಖಲೆಯನ್ನೂ ಪುಡಿ ಮಾಡಲಿದ್ದಾರೆ ಎಂದು ಅಜರ್ ಹೇಳಿದ್ದಾರೆ. ಏಕದಿನದಲ್ಲಿ 39, ಟೆಸ್ಟ್ ಕ್ರಿಕೆಟ್‌ನಲ್ಲಿ 25 ಸೆಂಚುರಿ ದಾಖಲಿಸಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 64 ಶತಕ ಪೂರೈಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಚಿನ್ ಗರಿಷ್ಠ ಸೆಂಚುರಿ ದಾಖಲೆ ಪುಡಿ ಮಾಡಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 103 ರನ್ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದ ಸೋಲಿನಿಂದ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
 

Last Updated 16, Jan 2019, 12:06 PM IST