ಧೋನಿ, ಧವನ್ ಅಭ್ಯಾಸ ಶುರು

Published : Jan 10, 2019, 04:03 PM IST
ಧೋನಿ, ಧವನ್ ಅಭ್ಯಾಸ ಶುರು

ಸಾರಾಂಶ

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದ ನೆಟ್ಸ್‌ನಲ್ಲಿ ಧೋನಿ, ಧವನ್, ಜಾಧವ್ ಮತ್ತು ರಾಯುಡು, ಕಠಿಣ ಅಭ್ಯಾಸ ನಡೆಸಿದರು. ಅಭ್ಯಾಸದ ವೇಳೆ ಅನುಭವಿ ಬೌಲರ್’ಗಳಿಲ್ಲದೇ  ಇದ್ದುದರಿಂದ ನಾಲ್ವರೂ, ಥ್ರೋ ಡೌನ್ ಎಸೆತಗಳನ್ನು ಎದುರಿಸಿದರು.

ಸಿಡ್ನಿ(ಜ.10): ಜ.12ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಭಾರೀ ಸಿದ್ಧತೆ ನಡೆಸಿದೆ. ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ಶಿಖರ್ ಧವನ್, ಅಂಬಟಿ ರಾಯುಡು, ರೋಹಿತ್ ಶರ್ಮಾ, ಕೇದಾರ್ ಜಾಧವ್, ಯಜುವೇಂದ್ರ ಚಹಲ್, ದಿನೇಶ್ ಕಾರ್ತಿಕ್ ಮತ್ತು ಖಲೀಲ್ ಅಹ್ಮದ್, ಈಗಾಗಲೇ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. 

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದ ನೆಟ್ಸ್‌ನಲ್ಲಿ ಧೋನಿ, ಧವನ್, ಜಾಧವ್ ಮತ್ತು ರಾಯುಡು, ಕಠಿಣ ಅಭ್ಯಾಸ ನಡೆಸಿದರು. ಅಭ್ಯಾಸದ ವೇಳೆ ಅನುಭವಿ ಬೌಲರ್’ಗಳಿಲ್ಲದೇ  ಇದ್ದುದರಿಂದ ನಾಲ್ವರೂ, ಥ್ರೋ ಡೌನ್ ಎಸೆತಗಳನ್ನು ಎದುರಿಸಿದರು. ಇದೇ ವೇಳೆ ಧೋನಿ, ಸಹಾಯಕ ಕೋಚ್ ಸಂಜಯ್ ಬಾಂಗರ್ ಅವರ ನೆರವಿನಿಂದ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಧವನ್ ಮತ್ತು ರಾಯುಡು, ಬಲಗೈ ಮತ್ತು ಎಡಗೈ ಥ್ರೋ ಡೌನ್ ತಜ್ಞರನ್ನು ಎದುರಿಸಿದರು. 

ಏಕದಿನದಲ್ಲಿ ಭಾರತಕ್ಕೆ ನಂ.1 ಚಾನ್ಸ್..!

2018ರ ನವೆಂಬರ್‌ನಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ ಬಾರಿಗೆ ವಿಂಡೀಸ್ ವಿರುದ್ಧ ಏಕದಿನ ಸರಣಿ ಆಡಿತ್ತು. 2019ರ ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಆಸ್ಟ್ರೇಲಿಯಾ ಸರಣಿ ಬಳಿಕ ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು