ಬೆಂಗಳೂರು[ಡಿ.22]: IPL 2019ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎಲ್ಲಾ ತಂಡಗಳಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ಉತ್ತಮ ಆಟಗಾರರನ್ನೇ ಖರೀದಿಸಿದೆ. ಹೀಗಿದ್ದರೂ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಮೌಲ್ಯವನ್ನೂ ಘೋಷಿಸಿದರೂ ಯುವ ಕ್ರಿಕೆಟಿಗ ಹಾಗೂ ಆಲ್ರೌಂಡರ್ ಸ್ಯಾಮ್ ಕುರ್ರಾನ್‌ರನ್ನು ಖರೀದಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಆರ್‌ಸಿಬಿಗೆ ಇದ್ದೇ ಇರುತ್ತದೆ.
20 ವರ್ಷದ ಸ್ಯಾಮ್ ಇದೇ ಮೊದಲ ಬಾರಿ IPL ಹರಾಜಿನಲ್ಲಿ ಭಾಗಿಯಾಗಿದ್ದರು. ಸ್ಯಾಮ್ ಬೇಸ್ ಪ್ರೈಸ್ 2 ಕೋಟಿ ಮೌಲ್ಯವಾಗಿದ್ದರೂ, ಹರಾಜು ಪ್ರಕ್ರಿಯೆಯಲ್ಲಿ ಅವರ ಹೆಸರು ಕೂಗುತ್ತಿದ್ದಂತೆಯೇ ಫ್ರಾಂಚೈಸಿಗಳು ಅವರನ್ನು ಖರೀದಿಸಲು ಸ್ಪರ್ಧೆಗೆ ಬಿದ್ದಂತೆ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಮೌಲ್ಯವೇರಿಸುತ್ತಾ ಹೋಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಸಿದರಾದರೂ, ರಾಯಲ್ ಚಾಲೆಂಜರ್ಸ್ ಸ್ಯಾಮ್ರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಭಾರೀ ಯತ್ನ ನಡೆಸಿತು. ಎರಡೂ ಫ್ರಾಂಚೈಸಿಗಳ ತೀವ್ರ ಪೈಪೋಟಿಯಲ್ಲಿ ಸ್ಯಾಮ್ ಮೌಲ್ಯ 4.80ಕೋಟಿಗೆ ತಲುಪಿತ್ತು. ಅಷ್ಟರಲ್ಲಿ ಆರ್‌ಸಿಬಿ ಮೌನವಾಗಿದ್ದು, ಇನ್ನೇನು ಸ್ಯಾಮ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸುತ್ತದೆ ಎನ್ನುವಷ್ಟರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಯಾಮ್‌ರನ್ನು ಖರೀದಿಸಲು ಆಸಕ್ತಿ ತೋರಿದೆ.
ಆರ್‌ಸಿಬಿ ಸೇರಿಕೊಂಡ ಸಂತಸ-ಶಿಮ್ರೊನ್ ಹೆಟ್ಮೆರ್ ವೀಡಿಯೋ ವೈರಲ್!
ಮತ್ತೆ ಡೆಲ್ಲಿ ಹಾಗೂ ಪಂಜಾಬ್ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಸ್ಯಾಮ್‌ರನ್ನು ಖರೀದಿಸಿಯೇ ಸಿದ್ಧ ಎನ್ನುವಂತೆ ಅಖಾಡಕ್ಕಿಳಿದಿದ್ದ ಪಂಜಾಬ್ 6 ಕೋಟಿವರೆಗೂ ಸ್ಯಾಮ್ ಮೌಲ್ಯವನ್ನು ಏರಿಸಿತು. ಈ ನಡುವೆ ಮತ್ತೆ ಎಂಟ್ರಿ ಕೊಟ್ಟ ಆರ್ ಸಿಬಿ ತನ್ನ ಕೊನೆಯ ಪ್ರಯತ್ನ ಎಂಬಂತೆ ಸ್ಯಾಮ್ ಮೌಲ್ಯ 7 ಕೋಟಿಗೇರಿಸಿದೆ. ಈ ಇತರ ಫ್ರಾಂಚೈಸಿಗಳೆಲ್ಲಾ ಮೌನ ವಹಿಸಿದ್ದು, ಇನ್ನೇನು ಸ್ಯಾಮ್ ತಮ್ಮದೇ ತಂಡಕ್ಕೆ ಸೇರುತ್ತಾರೆ ಎಂದು ಆರ್ ಸಿಬಿ ಖುಷಿ ಪಡುತ್ತಿರುವಾಗಲೇ, ಕಿಂಗ್ಸ್ ಇಲೆವೆನ್ ಪಂಜಾಬ್ 7.20 ಕೋಟಿ ಘೋಷಿಸಿ ಕ್ಷಣಾರ್ಧದಲ್ಲಿ ಹಾಲ್ ತುಂಬಾ ಮೌನ ಅವರಿಸುವಂತೆ ಮಾಡಿದೆ.
ಐಪಿಎಲ್ ಹರಾಜು 2019: 16 ವರ್ಷದ ಪೋರನಿಗೆ 1.5 ಕೋಟಿ ನೀಡಿದ ಆರ್‌ಸಿಬಿ
ಈ ವೇಳೆ ಆರ್‌ಸಿಬಿ ಇಷ್ಟವಿಲ್ಲದಿದ್ದರೂ, ತನ್ನ ಡೀಲ್‌ನ್ನು ಕ್ಲೋಸ್ ಮಾಡಬೇಕಾಯಿತು. ಯಾಕೆಂದರೆ ಉಳಿದ ಹಣದಲ್ಲಿ ಬೆರೆ ಆಟಗಾರರನ್ನೂ ಖರೀದಿಸುವ ಅನಿವಾರ್ಯತೆ ಎದುರಾಗಿತ್ತು. ಆದರೆ ಆರ್‌ಸಿಬಿ ಕೊಂಚ ಯೋಚಿಸಿದ್ದರೆ ಬಹುಶಃ ಈ ಆಟಗಾರನನ್ನು 7.25 ಲಕ್ಷ ಮೌಲ್ಯಕ್ಕೆ ಖರೀದಿಸಬಹುದಾಗಿತ್ತು. ಅದೇನಿದ್ದರೂ ಸ್ಯಾಮ್ ಮಾತ್ರ ಪಂಜಾಬ್ ತೆಕ್ಕೆಗೆ ಸೇರಿಯಾಗಿದೆ. ಸ್ಯಾಮ್‌ರನ್ನು ಖರೀದಿಸಲು ಇಷ್ಟೊಂದು ಪೈಪೋಟಿ ಏರ್ಪಟ್ಟಿದೆ ಎಂದರೆ ಅದರ ಹಿಂದೆ ಹಲವಾರು ಕಾರಣಗಳಿವೆ.
ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!
ಮೊದಲನೆಯದಾಗಿ ಸ್ಯಾಮ್ ಓರ್ವ ಅತ್ಯುತ್ತಮ ಹಾಗೂ ವೇಗಿ ಬೌಲರ್, ಇದರೊಂದಿಗೆ ಬ್ಯಾಟಿಂಗ್ ಕೂಡಾ ಚೆನ್ನಾಗೇ ಮಾಡುತ್ತಾರೆ. ಒಂದು ವೇಳೆ ಈ ಬಾರಿ ವಿದೇಶದಲ್ಲಿ ಪಂದ್ಯಗಳು ನಡೆದಿದ್ದರೆ ಅವರು ಮಹತ್ವದ ಪಾತ್ರ ನಿಭಾಯಿಸುತ್ತಿದ್ದರು. ಇವರ ಕ್ರಿಕೆಟ್ ಬದುಕನ್ನು ನೋಡುವುದಾದರೆ ಈವರೆಗೂ 7 ಟೆಸ್ಟ್ ಪಂದ್ಯಗಳಲ್ಲಿ 36ರ ಉತ್ತಮ ಸರಾಸರಿಯಲ್ಲಿ ರನ್ ಗಳಿಸಿ, ಬರೋಬ್ಬರಿ 14 ವಿಕಟ್ ಬೀಳಿಸಿದ್ದಾರೆ. ಹೀಗಿದ್ದರೂ ಸೀಮಿತ ಓವರ್ಗಳ ಪಂದ್ಯದಲ್ಲಿ ಇವರು ಭಾಗವಹಿಸಿದ್ದು, ಬಹಳ ವಿರಳ. ಹೀಗಿರುವಾಗ ಅವರು 2019ರ ಐಪಿಎಲ್ ನಲ್ಲಿ ಯಾವ ರೀತಿ ಆಡುತ್ತಾರೆ ಎಂಬುವುದು ಭಾರೀ ಕುತೂಹಲ ಮೂಡಿಸಿದೆ.