
ರಾಂಚಿ(ಅ.16): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ವಯಸ್ಸು 37 ಆದರೂ ಈಗಲೂ ಅಷ್ಟೇ ಫಿಟ್. ರನ್ನಿಂಗ್‌ನಲ್ಲಿ ಯುವಕರನ್ನೇ ನಾಚಿಸುತ್ತಾರೆ ಮಾಜಿ ನಾಯಕ. ಧೋನಿ ಎಷ್ಟು ಫಿಟ್ ಆಗಿದ್ದಾರೋ, ಪುತ್ರಿ ಝಿವಾ ಧೋನಿ ಕೂಡ ಅಷ್ಟೇ ಫಿಟ್ ಆಗಿದ್ದಾರೆ.
ಎಂ.ಎಸ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೆ ಧೋನಿಯ ಅಭ್ಯಾಸ, ಫಿಟ್ನೆಸ್ ಕಸರತ್ತು ಪ್ರತಿ ದಿನ ಮುಂದುವರಿಯುತ್ತೆ. ಧೋನಿ ರೀತಿಯಲ್ಲೇ ಮಗಳು ಝಿವಾ ಕೂಡ ಫಿಟ್ನೆಸ್ ಕಸರತ್ತು ಆರಂಭಿಸಿದ್ದಾರೆ.
;
ಮನೆಯಲ್ಲಿ ವ್ಯಾಯಾಮ ಕಸರತ್ತು ಮಾಡುತ್ತಿರುವ ಝಿವಾ ಧೋನಿ ವೀಡಿಯೋ ಇದೀಗ ವೈರಲ್ ಆಗಿದೆ. ಮನೆಯಲ್ಲಿ ಝಿವಾ ಕಸರತ್ತು ಮಾಡೋ ಮೂಲಕ ಅಪ್ಪನ ರೀತಿಯಲ್ಲಿ ಫಿಟ್ ಆಗಿಲು ಪ್ರಯತ್ನ ಮಾಡಿದ್ದಾರೆ.
ಏಷ್ಯಾಕಪ್ ಟೂರ್ನಿ ಬಳಿಕ ವಿಶ್ರಾಂತಿ ಜಾರಿರುವ ಎಂ.ಎಸ್.ಧೋನಿ ಇದೀಗ ವೆಸ್ಟ್ಇಂಡೀಸ್ ವಿರುದ್ದದ ಏಕದಿನ ಹಾಗೂ ಟಿ20 ಸರಣಿ ಆಡಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.