
ರಾಂಚಿ(ಜು.29): ಫುಟ್ಬಾಲ್ ಪಟುಗಳು ಮಾಡುತ್ತಿದ್ದ ಡಿಫರೆಂಟ್ ಹೇರ್ ಸ್ಟೈಲ್‌ಗಳನ್ನ ಟೀಂ ಇಂಡಿಯಾಗೆ ತಂದ ಕೀರ್ತಿ ಎಂ ಎಸ್ ಧೋನಿಗೆ ಸಲ್ಲಬೇಕು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ಉದ್ದ ಕೂದಲಿನ ಮೂಲಕ ಗಮಸೆಳೆದಿದ್ದರು.
ಬಳಿಕ ಧೋನಿ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್, ಸ್ಪೈಕ್, ಮೊಹವಾಕ್, ಬಾಲ್ಡ್, ಟ್ರಿಮ್ ಸೇರಿದಂತೆ ವಿಚಿತ್ರ ಹೇರ್ ಸ್ಟೈಲ್‌ಗಳಲ್ಲಿ ಧೋನಿ ಮನೆಮಾತಾಗಿದ್ದಾರೆ. ಇದೀಗ ಎಂ ಎಸ್ ಧೋನಿ ಮತ್ತೆ ಹೊಸ ಹೇರ್ ಸ್ಟೈಲ್ ಮಾಡಿ ಸುದ್ದಿಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕತದಿನ ಸರಣಿ ಬಳಿಕ ತವರಿಗೆ ಮರಳಿದ ಎಂ ಎಸ್ ಧೋನಿ ತಮ್ಮ ಹಳೇ ಹೇರ್ ಸ್ಡೈಲ್ ಮಾಡಿದ್ದಾರೆ. ವಿ ಹವ್ಕ್ ಕಟ್ಟಿಂಗ್ ಮಾಡಿಸಿದ್ದಾರೆ. ಹಿಂಭಾಗದಲ್ಲಿ ವಿ ಶೇಪ್ ನೀಡೋ ಮೂಲಕ ತಮ್ಮ ಹಳೇ ಸ್ಟೈಲ್ ಮೊರೆಹೋಗಿದ್ದಾರೆ.
ತಲೆ ಹಿಂಭಾಗದಲ್ಲಿ ಉದ್ದ ಕೂದಲು ಬಿಟ್ಟು ಅದನ್ನ ವಿ ಶೇಪ್‌ನಲ್ಲಿ ಕಟ್ಟಿಂಗ್ ಮಾಡಿದ್ದಾರೆ. ಈ ಸ್ಟೈಲ್‌ಗೆ ಅಡಿಪಾಯ ಹಾಕಿದ್ದು ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಇಂಗ್ಲೆಂಡ್ ಪ್ರವಾಸದ ವೇಳೆ ಧೋನಿ ಹುಟ್ಟುಹಬ್ಬಕ್ಕಾಗಿ ಹಾರ್ದಿಕ್ ಪಾಂಡ್ಯ ಕಟ್ಟಿಂಗ್ ಮಾಡೋ ಮೂಲಕ ಸ್ಪೆಷಲ್ ಗಿಫ್ಟ್ ನೀಡಿದ್ದರು. ಧೋನಿ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ವಿ ಹಾವ್ಕ್ ಕಟ್ಟಿಂಗ್ ಮಾಡಿದ್ದರು. ಇದೀಗ ಧೋನಿ ಅದೇ ಕಟ್ಟಿಂಗ್ ಮಾಡಿಸಿ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.