ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗಾಗಿ ನಿಯಮ ಸಡಿಲಗೊಳಿಸಿದ ಬಿಸಿಸಿಐ

By Suvarna NewsFirst Published Jul 29, 2018, 1:02 PM IST
Highlights

ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಂದಾಗಿ ಬಿಸಿಸಿಐ ತನ್ನ ನಿಯಮವನ್ನೇ ಸಡಿಲಿಸಿದೆ. ಅಷ್ಟಕ್ಕೂ ಬಿಸಿಸಿಐ ಜಾರಿಗೆ ತಂದಿದ್ದ ನಿಯಮವೇನು? ಇದೀಗ ಬಿಸಿಸಿಐ ಬದಲಾಯಿಸಿದ ನಿಯಮವೇನು? ಇಲ್ಲಿದೆ ಸಂಪೂರ್ಣ ವಿವರ.
 

ಮುಂಬೈ(ಜು.29): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. ಟೆಸ್ಟ್ ಟೂರ್ನಿ ವೇಳೆ ಕ್ರಿಕೆಟಿಗರ ಪತ್ನಿಯರು, ಗೆಳತಿಯರು ಜೊತೆಗಿರಬಾರದು ಎಂದಿದ್ದ ಬಿಸಿಸಿಐ ಇದೀಗ ನಿಯಮ ಸಡಿಲಗೊಳಿಸಿದೆ.

ಏಕದಿನ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಪತ್ನಿಯರ ಜೊತೆ ಇಂಗ್ಲೆಂಡ್ ಸುತ್ತಾಡಿದ್ದರು. ಬಳಿಕ ಅಭ್ಯಾಸ ಪಂದ್ಯ ಆರಂಭವಾಗುತ್ತಿದ್ದಂತೆ, ಕ್ರಿಕೆಟಿಗರ ಪತ್ನಿಯರನ್ನ ಇಂಗ್ಲೆಂಡ್ ತೊರೆಯಲು ಬಿಸಿಸಿಐ ಸೂಚಿಸಿತ್ತು. ಇದೀಗ ಕ್ರಿಕೆಟಿಗರ ಜೊತೆ ತಂಗಲು ಪತ್ನಿಯರಿಗೆ 14 ದಿನದ ಅವಕಾಶ ನೀಡಿದೆ.

ಆಗಸ್ಟ್ 1 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಟೆಸ್ಟ್ ಸರಣಿ ಆರಂಭಾದ 2 ವಾರಗಳ ಬಳಿಕ ಕ್ರಿಕೆಟಿಗರ ಪತ್ನಿಯರು ಟೀಂ ಇಂಡಿಯಾ ಸೇರಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ. ಇನ್ನುಳಿದ 14 ದಿನ ಭಾರತೀಯ ಕ್ರಿಕೆಟಿಗರ ಪತ್ನಿಯರು ಹಾಗೂ ಗೆಳೆತಿಯರು, ಕ್ರೆಕಿಟಗರ ಜೊತೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

click me!