ಮುಂಬೈ ವಿರುದ್ಧದ ಪಂದ್ಯಕ್ಕೆ ಧೋನಿ, ಜಡೇಜಾಗೆ ವಿಶ್ರಾಂತಿ -ಇಲ್ಲಿದೆ ಕಾರಣ!

Published : Apr 26, 2019, 09:58 PM IST
ಮುಂಬೈ ವಿರುದ್ಧದ ಪಂದ್ಯಕ್ಕೆ ಧೋನಿ, ಜಡೇಜಾಗೆ ವಿಶ್ರಾಂತಿ -ಇಲ್ಲಿದೆ ಕಾರಣ!

ಸಾರಾಂಶ

ತವರಿನಲ್ಲಿನ ಮುಂಬೈ ಇಂಡಿಯನ್ಸ್ ವಿರುದ್ಧದ ಹೋರಾಟಕ್ಕೆ CSK ನಾಯಕ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಇವರಿಬ್ಬರಿಗೂ ವಿಶ್ರಾಂತಿ ನೀಡಲು ಕಾರಣವೇನು? ಇಲ್ಲಿದೆ ವಿವರ. 

ಚೆನ್ನೈ(ಏ.26): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ 2ನೇ ಬಾರಿಗೆ ತಂಡದಿಂದ ಹೊರುಗುಳಿದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಿಂದ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಸುರೇಶ್ ರೈನಾ ತಂಡದ ನಾಯಕತ್ವ ವಹಿಸಿಕೊಂಡರೆ, ಅಂಬಾಟಿ ರಾಯುಡು ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರು.

ಇದನ್ನೂ ಓದಿ: ಗೆಲುವಿಗೆ ಮರಳಿದ RCBಗೆ ನಿಜಕ್ಕೂ ನೋವಾಗಿದ್ದು ಎಲ್ಲಿ? ಕೊಹ್ಲಿ ಹೇಳಿದ್ರು ಸತ್ಯ!

ಮುಂಬೈ ವಿರುದ್ಧದ ಮಹತ್ವದ ಪಂದ್ಯಕ್ಕೆ ಧೋನಿ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲು ಕಾರಣವಿದೆ. ಅನಾರೋಗ್ಯದ ಕಾರಣ ಧೋನಿ ಹಾಗೂ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಟಾಸ್ ವೇಳೆ ಸುರೇಶ್ ರೈನಾ ಈ ಮಾಹಿತಿ ಖಚಿತಪಡಿಸಿದ್ದರು.

ಇದನ್ನೂ ಓದಿ: ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!

ಈ ಆವೃತ್ತಿಯಲ್ಲಿ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ಧೋನಿ ತಂಡದಿಂದ ಹೊರಗುಳಿದಿದ್ದರು. ಈ ಎರಡು ಪಂದ್ಯ ಹೊರತು ಪಡಿಸಿದರೆ, 2010ರಲ್ಲಿ ಧೋನಿ ಐಪಿಎಲ್ ಪಂದ್ಯದಿಂದ ಹೊರಗುಲಿದಿದ್ದರು. ಇದಾದ ಬಳಿಕ ಇದೀಗ 2019ರ ಐಪಿಎಲ್ ಟೂರ್ನಿಯಲ್ಲಿ 2 ಬಾರಿ ಹೊರಗುಳಿದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!