
ಮುಂಬೈ(ಏ.26): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬುಧವಾರ(ಏ.24) 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಕ್ರಿಕೆಟ್ ದಿಗ್ಗಜನಿಗೆ ವಿಶ್ವದಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಸಚಿನ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕೂಡ ತೆಂಡುಲ್ಕರ್‌ಗೆ ಹಾಡಿನ ಮೂಲಕ ಶುಭಾಶಯ ಕೋರಿದ್ದರು. ಇದೀಗ ಕಾಂಬ್ಳಿ ಶುಭಾಶಯಕ್ಕೆ ಸಚಿನ್ ಪ್ರತಿಕ್ರಿಯೆ ಜೊತೆ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್‌ಗೆ ಹುಟ್ಟುಹಬ್ಬದ ಸಂಭ್ರಮ - ಗಣ್ಯರಿಂದ ಶುಭಾಶಯ!
ಯಾದ್ ಕರೇಗಿ ದುನಿಯಾ ತೇರಾ ಮೇರಾ ಅಫ್ಸಾನ ಅನ್ನೋ ಹಾಡು ಹಾಡೋ ಮೂಲಕ ವಿನೋದ್ ಕಾಂಬ್ಳಿ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್, ಈ ಹಾಡು ನಿಜಕ್ಕೂ ಗ್ರೇಟ್. ಆದರೆ ನನಗೆ ಆಶ್ಚರ್ಯವಾಗಿರೋದು ವಿನೋದ್ ಕಾಂಬ್ಳಿ ದಾಡಿ ಬೆಳ್ಳಗಾದರೂ ಹುಬ್ಬು ಮಾತ್ರ ಕಪ್ಪಗಿರುವುದು ಹೇಗೆ? ಎಂದು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!
ಐಪಿಎಲ್ ಟೂರ್ನಿ ಆರಂಭಗೊಂಡ ಬಳಿಕ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ ಈ ವರ್ಷ ವಿಶೇಷವಾಗಿ ಅಭಿಮಾನಿಗಳ ಜೊತೆ ಸಚಿನ್ ಹುಟ್ಟು ಹಬ್ಬ ಆಚರಿಸಿದ್ದಾರೆ. ಇಷ್ಟೇ ಅಲ್ಲ ಅಭಿಮಾನಿಗಳ ಜೊತೆ ಸಚಿನ್ ಫೋಟೋ ತೆಗಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.