ಭಾರತದ ಚೊಚ್ಚಲ ಮೋಟೊ ಜಿಪಿ: ಮಾರ್ಕೊ ಚಾಂಪಿಯನ್..!

By Kannadaprabha News  |  First Published Sep 25, 2023, 11:17 AM IST

ಇಲ್ಲಿನ ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಮೋಟೋ ಜಿಪಿ ಭಾರತ್‌ ರೇಸ್‌ನಲ್ಲಿ ಮೂನಿ ವಿಆರ್‌46 ತಂಡದ ರೇಸ್‌ ಬೆಝೆಚಿ ಅಗ್ರಸ್ಥಾನ ಪಡೆದರು. ಪ್ಯಾರಾಮ್ಯಾಕ್‌ ತಂಡದ ಖ್ಯಾತ ರೇಸರ್‌ ಜಾರ್ಜ್‌ ಮಾರ್ಟಿನ್‌, ರೇಸ್‌ನ ಆರಂಭದಲ್ಲಿ ಬೆಝೆಚಿಗೆ ತೀವ್ರ ಪೈಪೋಟಿ ನೀಡಿದರೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಜಗತ್ಪ್ರಸಿದ್ಧ ಯಮಾಹಾ ಸಂಸ್ಥೆಯ ಫ್ಯಾಬಿಯೋ ಕ್ವಾರ್ಟರಾರೊ 3ನೇ ಸ್ಥಾನಿಯಾದರು.


ಗ್ರೇಟರ್‌ ನೋಯ್ಡಾ(ಸೆ.25): ಚೊಚ್ಚಲ ಬಾರಿಗೆ ಭಾರತ ಆತಿಥ್ಯ ವಹಿಸಿದ, ಅತ್ಯುತ್ಕೃಷ್ಟ ಗುಣಮಟ್ಟದ ಬೈಕ್‌ ರೇಸಿಂಗ್‌ ಮೋಟೋ ಜಿಪಿಯಲ್ಲಿ ಇಟಲಿಯ ಮಾರ್ಕೊ ಬೆಝೆಚಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಇಲ್ಲಿನ ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಮೋಟೋ ಜಿಪಿ ಭಾರತ್‌ ರೇಸ್‌ನಲ್ಲಿ ಮೂನಿ ವಿಆರ್‌46 ತಂಡದ ರೇಸ್‌ ಬೆಝೆಚಿ ಅಗ್ರಸ್ಥಾನ ಪಡೆದರು. ಪ್ಯಾರಾಮ್ಯಾಕ್‌ ತಂಡದ ಖ್ಯಾತ ರೇಸರ್‌ ಜಾರ್ಜ್‌ ಮಾರ್ಟಿನ್‌, ರೇಸ್‌ನ ಆರಂಭದಲ್ಲಿ ಬೆಝೆಚಿಗೆ ತೀವ್ರ ಪೈಪೋಟಿ ನೀಡಿದರೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಜಗತ್ಪ್ರಸಿದ್ಧ ಯಮಾಹಾ ಸಂಸ್ಥೆಯ ಫ್ಯಾಬಿಯೋ ಕ್ವಾರ್ಟರಾರೊ 3ನೇ ಸ್ಥಾನಿಯಾದರು.

Latest Videos

undefined

ಇದೇ ವೇಳೆ 12 ಲ್ಯಾಪ್‌ಗಳ ಮೋಟೋ 2 ರೇಸ್‌ನಲ್ಲಿ ಅಜೊ ಮೋಟಾರ್‌ಸ್ಪೋರ್ಟ್ಸ್‌ನ ಪೆಡ್ರೊ ಅಕೋಸ್ಟಾ ಚಾಂಪಿಯನ್‌ ಎನಿಸಿಕೊಂಡರು. ಮಾರ್ಕ್‌ ವಿಡಿಎಸ್‌ ತಂಡದ ಟೋನಿ ಅರ್ಬೊಲಿನೊ 2ನೇ, ಅಮೆರಿಕದ ಜೋ ರೋಬರ್ಟ್ಸ್‌ ತೃತೀಯ ಸ್ಥಾನ ಪಡೆದರು. ಇನ್ನು ಲಿಫರ್ಡ್‌ ಹೋಂಡಾದ ಜೇಮ್ಸ್ ಮಾಸಿಯಾ ಮೋಟೋ 3 ರೇಸ್‌ನಲ್ಲಿ ಪ್ರಶಸ್ತಿ ಗೆದ್ದುಕಂಡರು.

Asian Games 2023: ಭಾರತದ ಅಥ್ಲೀಟ್‌ಗಳ ಪದಕ ಬೇಟೆ ಶುರು..!

ಭಾನುವಾರ ನಡೆದ ರೇಸ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಸಿರು ನಿಶಾನೆ ತೋರಿದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪುರುಷರ ಫುಟ್ಬಾಲ್‌: ಭಾರತ ಪ್ರಿ ಕ್ವಾರ್ಟರ್‌ಗೆ

ಏಷ್ಯನ್‌ ಗೇಮ್ಸ್‌ನ ಬಹುನಿರೀಕ್ಷಿತ ಫುಟ್ಬಾಲ್‌ನಲ್ಲಿ ಭಾರತ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಮ್ಯಾನ್ಮಾರ್‌ ವಿರುದ್ಧ ಭಾರತ 1-1 ಗೋಲುಗಳಿಂದ ಡ್ರಾ ಸಾಧಿಸಿತು. ನಾಯಕ ಸುನಿಲ್‌ ಚೆಟ್ರಿ 23ನೇ ನಿಮಿಷದಲ್ಲಿ ಗೋಲು ಬಾರಿಸಿದರೂ, ಬಳಿಕ ಮ್ಯಾನ್ಮಾರ್‌ ಡ್ರಾ ಸಾಧಿಸಲು ಯಶಸ್ವಿಯಾಯಿತು. ಇದರೊಂದಿಗೆ ಎರಡೂ ತಂಡಗಳು ಸಮಾನ ಅಂಕ ಗಳಿಸಿದರೂ, ಗೋಲು ಗಳಿಕೆ ಆಧಾರದಲ್ಲಿ ಭಾರತ ಪ್ರಿ ಕ್ವಾರ್ಟರ್‌ಗೇರಿತು. ಇದೇ ವೇಳೆ ಮಹಿಳಾ ತಂಡ ಗುಂಪು ಹಂತದಿಂದಲೇ ಹೊರಬಿತ್ತು. ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ದ 0-1 ಪರಾಭವಗೊಂಡಿತು.

ವಾಲಿಬಾಲ್‌: ಭಾರತದ ಓಟಕ್ಕೆ ಜಪಾನ್‌ ಬ್ರೇಕ್‌

ಈ ಬಾರಿ ಕ್ರೀಡಾಕೂಟದಲ್ಲಿ ಅಭೂತಪೂರ್ವ ಪ್ರದರ್ಶದನೊಂದಿಗೆ ಎಲ್ಲರ ಗಮನ ಸೆಳೆದಿದ್ದ ಭಾರತ ಪುರುಷರ ವಾಲಿಬಾಲ್‌ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೋಲುವ ಮೂಲಕ ಅಭಿಯಾನ ಕೊನೆಗೊಳಿಸಿದೆ. ಗುಂಪು ಹಂತದಲ್ಲಿ ಭಾರತ ತಂಡ ಕಾಂಬೋಡಿಯಾ, ಬಲಿಷ್ಠ ದ.ಕೊರಿಯಾ ಹಾಗೂ ಚೈನೀಸ್‌ ತೈಪೆ ವಿರುದ್ಧ ಗೆದ್ದಿತ್ತು. ಭಾನುವಾರ ಅಂತಿಮ 8ರ ಸುತ್ತಿನಲ್ಲಿ ಭಾರತ ತಂಡ ಜಪಾನ್‌ ವಿರುದ್ಧ 0-3 ಅಂತರದ ಸೋಲುಕಂಡಿತು. ಇನ್ನು ಭಾರತ 5-6ನೇ ಸ್ಥಾನಕ್ಕಾಗಿ ಮಂಗಳವಾರ ಪಾಕಿಸ್ತಾನ ಅಥವಾ ಕತಾರ್‌ ವಿರುದ್ಧ ಆಡಲಿದೆ.

Asian Games 2023: ವಿಶ್ವದಾಖಲೆಯೊಂದಿಗೆ ದೇಶಕ್ಕೆ ಮೊದಲ ಚಿನ್ನದ ಕಿರೀಟ ತೊಡಿಸಿದ ಭಾರತದ ಶೂಟರ್‌ಗಳ ತಂಡ

ಹಾಕಿ: ಭಾರತ ಪುರುಷರಿಗೆ ದಾಖಲೆಯ 16-0 ಗೆಲುವು

ಏಷ್ಯಾಡ್‌ನಲ್ಲಿ ಈ ವರೆಗೆ 15 ಪದಕಗಳನ್ನು ಬಾಚಿಕೊಂಡಿರುವ ಭಾರತ ಪುರುಷರ ಹಾಕಿ ತಂಡ, ಈ ಬಾರಿ ಕ್ರೀಡಾಕೂಟದಲ್ಲಿ ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಭಾನುವಾರ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ ದಾಖಲೆಯ 16-0 ಗೋಲಿನ ಗೆಲುವು ಸಾಧಿಸಿತು. ಲಲಿತ್‌ ಉಪಾಧ್ಯಾಯ 4, ವರುಣ್‌ ಕುಮಾರ್‌ ಹಾಗೂ ಮಂದೀಪ್‌ ಸಿಂಗ್‌ ತಲಾ 3 ಗೋಲು ದಾಖಲಿಸಿದರು. ಭಾರತ ತನ್ನ 2ನೇ ಪಂದ್ಯದಲ್ಲಿ ಮಂಗಳವಾರ ಸಿಂಗಾಪೂರ ವಿರುದ್ಧ ಆಡಲಿದೆ.
 

click me!