ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ಜಟಾಪಟಿ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಶಮಿ ತನಗೆ ವಂಚಿಸಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹಸಿನ್ ಇದೀಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಡಿಟೇಲ್ಸ್
ಕೋಲ್ಕತ್ತಾ(ಜು.08): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಕಿತ್ತಾಟ ವಿಶ್ವ ಮಟ್ಟದಲ್ಲೇ ಭಾರಿ ಸುದ್ದಿಯಾಗಿತ್ತು. ಮೊಹಮ್ಮದ್ ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪತ್ನಿ ಹಸಿನ್, ಕಾನೂನು ಹೋರಾಟ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೂ ಮಾಕುಕತೆ ನಡೆಸಿದ್ದಾರೆ.
ಶಮಿ ಬೇರೆ ಯುವತಿ ಜೊತೆ ರಹಸ್ಯ ಮದುವೆ ಮಾಡಿಕೊಂಡು ನನಗೆ ವಂಚಿಸಿದ್ದಾರೆ ಎಂದು ಹಸಿನ್ ಜಹಾನ್ ದೂರು ದಾಖಲಿಸುತ್ತಿದ್ದಂತೆ, ಇತ್ತ ಶಮಿಗೆ ಬಿಸಿಸಿಐ ಕೂಡ ಶಾಕ್ ನೀಡಿತ್ತು. ವಾರ್ಷಿಕ ಒಪ್ಪಂದ ತಡೆಹಿಡಿದಿದ್ದಲ್ಲದೇ, ತಂಡದ ಆಯ್ಕೆಗೂ ಹಿಂದೇಟು ಹಾಕಿತ್ತು. ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್ ಪ್ರಕರಣ ಇನ್ನು ತಾರ್ಕಿಕ ಅಂತ್ಯ ಕಂಡಿಲ್ಲ. ಇತ್ತ ಮೊಹಮ್ಮದ ಶಮಿ ತಮ್ಮ ಕರಿಯರ್‌ನತ್ತ ಗಮನ ಕೇಂದ್ರಿಕರಿಸಿದ್ದಾರೆ. ಇತ್ತ ಹಸಿನ್ ಕೂಡ ತಮ್ಮ ಕರಿಯರ್ ಕಡೆ ಗಮನಹರಿಸಿದ್ದಾರೆ.
undefined
Hasin jahan I m pic.twitter.com/mXumuTAJRs
— Hasin Jahan (@HasinJahan4)
ಸದ್ಯ ಶಮಿಯಿಂದ ದೂರ ಉಳಿದಿರುವ ಪತ್ನಿ ಹಸಿನ್ ಇದೀಗ ಮಾಡೆಲಿಂಗ್ ಕರಿಯರ್‌ಗೆ ವಾಪಾಸ್ಸಾಗಿದ್ದಾರೆ. ಶಮಿ ಮದುವೆಗೂ ಮುನ್ನ ಹಸಿನ್ ಮಾಡೆಲಿಂಗ್ ತೊಡಗಿಸಿಕೊಂಡಿದ್ದರು. ಅಷ್ಟರಲ್ಲೇ ಶಮಿಯನ್ನ ಮದುವೆಯಾಗಿ ತಮ್ಮ ವೃತ್ತಿಗೆ ಪೂರ್ಣವಿರಾಮ ಹಾಕಿದ್ದರು.
ಶಮಿಗಾಗಿ ನಾನು ನನ್ನ ಮಾಡೆಲಿಂಗ್ ಕ್ಷೇತ್ರವನ್ನ ತೊರೆದಿದ್ದೆ. ಆದರೆ ಈಗ ನನ್ನ ಪುತ್ರಿಗಾಗಿ ಮತ್ತೆ ಮಾಡೆಲಿಂಗ್ ಕರಿಯರ್‌ನತ್ತ ಮುಖ ಮಾಡಿದ್ದೇನೆ. ನಾನು ಕಳೆದುಕೊಂಡ ಗೌರವವನ್ನ ಮತ್ತೆ ಗಳಿಸಬೇಕಿದೆ. ಹೀಗಾಗಿ ಮತ್ತೆ ಮಾಡೆಲಿಂಗ್ ಕರಿಯರ್ ಆಯ್ಕೆ ಮಾಡಿದ್ದೇನೆ ಎಂದು ಖಾಸಗಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಶಮಿ ಪತ್ನಿ ಹಸಿನ್ ಜಹಾನ್ ಈಗಾಗಲೇ ಮಾಡೆಲಿಂಗ್ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಇಷ್ಟೇ ಅಲ್ಲ ಶಮಿ ವಿರುದ್ಧದ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ.
My choice makes me perfect,for tha growth of my personality as an ideal woman ,it gives me confidence and makes me happy 😎😎😎😊😊😊😙😙😙 pic.twitter.com/wzIzODGHm9
— Hasin Jahan (@HasinJahan4)