ನ್ಯೂಜಿಲೆಂಡ್’ಗೆ ಆರಂಭದಲ್ಲೇ ಶಾಕ್ ಕೊಟ್ಟ ಭಾರತ; ಪಠಾಣ್ ದಾಖಲೆ ಮುರಿದ ಶಮಿ

By Web Desk  |  First Published Jan 23, 2019, 8:47 AM IST

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ಎರಡನೇ ಓವರ್’ನ ಕೊನೆಯ ಎಸೆತದಲ್ಲಿ ಶಾಕ್ ನೀಡುವಲ್ಲಿ ಯಶಸ್ವಿಯಾಯಿತು. ಶಮಿ ತಾವೆಸೆದ ಮೊದಲ ಓವರ್’ನಲ್ಲೇ ಮಾರ್ಟಿನ್ ಗಪ್ಟಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊದಲ ಯಶಸ್ಸು ಕಂಡರು.


ನೇಪಿಯರ್[ಜ.23]: ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಆರಂಭದಲ್ಲೇ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸುವ ಮೂಲಕ ಶಾಕ್ ನೀಡಿದ್ದಾರೆ. ಈ ಮೂಲಕ ದಿನದಾಟದ ಆರಂಭದಲ್ಲಿ ವಿರಾಟ್ ಕೊಹ್ಲಿ ಪಡೆ ಶುಭಾರಂಭ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ಎರಡನೇ ಓವರ್’ನ ಕೊನೆಯ ಎಸೆತದಲ್ಲಿ ಶಾಕ್ ನೀಡುವಲ್ಲಿ ಯಶಸ್ವಿಯಾಯಿತು. ಶಮಿ ತಾವೆಸೆದ ಮೊದಲ ಓವರ್’ನಲ್ಲೇ ಮಾರ್ಟಿನ್ ಗಪ್ಟಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊದಲ ಯಶಸ್ಸು ಕಂಡರು. ಆ ಬಳಿಕ ತಾವೆಸೆದ ಎರಡನೇ ಓವರ್’ನಲ್ಲಿ ಶಮಿ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಕಾಲಿನ್ ಮನ್ರೋ ಅವರನ್ನೂ ಬೌಲ್ಡ್ ಮಾಡಿ ಭಾರತಕ್ಕೆ ಆರಂಭಿಕ ಮೇಲುಗೈ ಸಾಧಿಸಲು ನೆರವಾದರು.

Tap to resize

Latest Videos

undefined

ಮೊದಲ 10 ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 34 ರನ್ ಬಾರಿಸಿದ್ದು, ರಾಸ್ ಟೇಲರ್ 14 ಹಾಗೂ ನಾಯಕ ಕೇನ್ ವಿಲಿಯಮ್ಸನ್ 06 ರನ್ ಬಾರಿಸಿದ್ದಾರೆ. ಭಾರತ ವಿರುದ್ಧದ 2014ರ ಸರಣಿಯಲ್ಲಿ ಟೇಲರ್-ವಿಲಿಯಮ್ಸನ್ ಜೋಡಿ ಕ್ರಮವಾಗಿ 121, 60, 130, 152 ಜತೆಯಾಟ ಆಡುವ ಮೂಲಕ ಭಾರತ ತಂಡವನ್ನು ಕಾಡಿತ್ತು. ಹೀಗಾಗಿ ಟೀಂ ಇಂಡಿಯಾ ಆದಷ್ಟು ಬೇಗ ಈ ಜೋಡಿಯನ್ನು ಬೇರ್ಪಡಿಸಬೇಕಿದೆ.

100 ಪೂರೈಸಿದ ಬಂಗಾಳ ವೇಗಿ:

ಬಂಗಾಳದ ವೇಗಿ ಮೊಹಮ್ಮದ್ ಶಮಿ ಕೇವಲ 55 ಇನ್ನಿಂಗ್ಸ್’ಗಳಲ್ಲಿ 100 ಕಬಳಿಸುವ ಮೂಲಕ ಈ ವೇಗವಾಗಿ ಈ ಸಾಧನೆ ಮಾಡಿದ ಭಾರತದ ಮೊದಲ ವೇಗಿ ಎನ್ನುವ ಕೀರ್ತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಶಮಿ 100 ಪೂರೈಸಲು ಕೇವಲ 01 ವಿಕೆಟ್’ಗಳ ಅವಶ್ಯಕತೆಯಿತ್ತು. ಮಾರ್ಟಿನ್ ಗಪ್ಟಿಲ್ ಅವರನ್ನು ಬಲಿ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಈ ಮೊದಲು ಇರ್ಫಾನ್ ಪಠಾಣ್[59], ಜಹೀರ್ ಖಾನ್[65], ಅಜಿತ್ ಅಗರ್’ಕರ್[67], ಜಾವಗಲ್ ಶ್ರೀನಾಥ್[68] ಇನ್ನಿಂಗ್ಸ್’ಗಳಲ್ಲಿ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. 

click me!