2019ರ ವಿಶ್ವಕಪ್ ಟೂರ್ನಿಗೆ ಆರ್.ಅಶ್ವಿನ್ ಪರಿಗಣಿಸಬೇಕು: ಗಂಭೀರ್

By Web DeskFirst Published Jan 22, 2019, 10:00 PM IST
Highlights

ಟೆಸ್ಟ್ ತಂಡಕ್ಕೆ ಸೀಮಿತವಾಗಿರುವ ಸ್ಪಿನ್ನರ್ ಆರ್ ಅಶ್ವಿನ್‌ಗೆ  2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕಾ? ಈ ಚರ್ಚೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ. ಇಲ್ಲಿದೆ ಗಂಭೀರ್ ಉತ್ತರ.

ನವದೆಹಲಿ(ಜ.22): ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದರೂ ಟೆಸ್ಟ್ ತಂಡಕ್ಕೆ ಸೀಮಿತವಾಗಿರುವ ಆರ್ ಅಶ್ವಿನ್‌ ಪರ ಕ್ರಿಕೆಟಿಗ ಗೌತಮ್ ಗಂಭೀರ್ ಬ್ಯಾಟ್ ಬೀಸಿದ್ದಾರೆ. ಇಂಗ್ಲೆಂಡ್‌ ನಡೆಯಲಿರುವ 2019ರ ವಿಶ್ವಕಪ್ ತಂಡಕ್ಕೆ ಆರ್ ಅಶ್ವಿನ್ ಪರಿಗಣಿಸಬೇಕು ಎಂದು ಗಂಭೀರ್ ಹೇಳಿದ್ದಾರೆ. 

ಇದನ್ನೂ ಓದಿ: ಬಲಿಷ್ಠ ನ್ಯೂಜಿಲೆಂಡ್ ವಿರುದ್ದ ಗೆಲುವು ದೊಡ್ಡ ಸವಾಲು: ಕೊಹ್ಲಿ!

ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಕುಲ್ದೀಪ್ ಯಾದವ್ ಹಾಗೂ ಯುಜವೇಂದ್ರ ಚೆಹಾಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ 2019ರ ವಿಶ್ವಕಪ್ ಟೂರ್ನಿಯಲ್ಲಿ ಆರ್ ಅಶ್ವಿನ್‌ಗೆ ಅವಕಾಶ ನೀಡಬೇತು. ಇಂಗ್ಲೆಂಡ್ ಕಂಡೀಷನ್‌ನಲ್ಲಿ ಅಶ್ವಿನ್ ಪರಿಣಾಮಕಾರಿಯಾಗಬಲ್ಲರು ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಆಸಿಸ್ ವಿರುದ್ಧದ ಗೆಲುವು- ಆಯ್ಕೆ ಸಮಿತಿಗೆ ಬಿಸಿಸಿಐ ಭರ್ಜರಿ ಗಿಫ್ಟ್!

ಟೆಸ್ಟ್‌ಗೆ ಸೀಮಿತವಾಗಿದ್ದ ಆಸ್ಟ್ರೇಲಿಯಾದ ನಥನ್ ಲಿಯೊನ್ ಏಕದಿನಕ್ಕೂ ಮರಳಿದ್ದಾರೆ. ಆರ್ ಅಶ್ವಿನ್ ಶ್ರೇಷ್ಠ ಸ್ಪಿನ್ನರ್. ಅಶ್ವಿನ್ ಅನುಭವ ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ನೆರವಾಗಲಿದೆ. ಹೀಗಾಗಿ 2019ರ ವಿಶ್ವಕಪ್ ತಂಡಕ್ಕೆ  ಆಶ್ವಿನ್ ಆಯ್ಕೆ ಸೂಕ್ತ ಎಂದು ಗಂಭೀರ್ ಹೇಳಿದ್ದಾರೆ.
 

click me!