ಬಲಿಷ್ಠ ನ್ಯೂಜಿಲೆಂಡ್ ವಿರುದ್ದ ಗೆಲುವು ದೊಡ್ಡ ಸವಾಲು: ಕೊಹ್ಲಿ!

By Web DeskFirst Published 22, Jan 2019, 9:11 PM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನ್ಯೂಜಿಲೆಂಡ್ ತವರಿನಲ್ಲಿ ಸರಣಿ ಗೆಲುವಿನ ಕುರಿತು ಕೊಹ್ಲಿ ಮಾತನಾಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
 

ನೇಪಿಯರ್(ಜ.22): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲುವಿನ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನ ತವರಿನಲ್ಲಿ ಸೋಲಿಸುವುದು ನಮ್ಮ ಮುಂದಿರುವ ಸವಾಲು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್- ಆದರೆ ಅಬ್ಬರಿಸಲು ಬಿಡಲ್ಲ: ವಿಲಿಯಮ್ಸನ್!

ಅನುಭವಿ ಹಾಗೂ ಯುವಕರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಹೆಚ್ಚು ಬ್ಯಾಲೆನ್ಸ್ ಆಗಿದೆ. ಟಿಮ್ ಸೌಥಿ, ಟ್ರೆಂಟ್ ಬೊಲ್ಟ್ ಒಳಗೊಂಡ ಅನುಭವಿ ಬೌಲಿಂಗ್ ಪಡೆ ಹೊಂದಿದೆ. ಕಳೆದೆರು ವರ್ಷದಲ್ಲಿ ನ್ಯೂಜಿಲೆಂಡ್ ಸ್ಥಿರ ಪ್ರದರ್ಶನ ನೀಡಿದೆ. ಇಷ್ಟೇ ಅಲ್ಲ ಕಿವೀಸ್ ತವರಿನಲ್ಲಿ ಬಲಿಷ್ಠ ತಂಡವನ್ನ ಸೋಲಿಸಲು ನಾವು ಹೆಚ್ಚಿನ ಶ್ರಮ ವಹಿಸಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ- ನಂ.1 ಸ್ಥಾನ ಕಾಪಾಡಿಕೊಂಡ ಕೊಹ್ಲಿ!

ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್, ಅನುಭವಿ ರಾಸ್ ಟೇಲರ್ ಸೇರಿದಂತೆ ನ್ಯೂಜಿಲೆಂಡ್ ಬ್ಯಾಟಿಂಗ್ ವಿಭಾಗವೂ ಅತ್ಯುತ್ತಮವಾಗಿದೆ. 2014ರ ಪ್ರವಾಸದಲ್ಲಿ ನಾವು ಮುಗ್ಗರಿಸಿದ್ದೆವು. ಆದರೆ ಸದ್ಯ ಟೀಂ ಇಂಡಿಯಾ ಅತ್ಯುತ್ತಮ ತಂಡವಾಗಿ ರೂಪುಗೊಂಡಿದೆ. ಹೀಗಾಗಿ ಆತ್ಮವಿಶ್ವಾಸದಲ್ಲೇ ಕಣಕ್ಕಿಳಿಯಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
 

Last Updated 22, Jan 2019, 9:12 PM IST