ರೋಚಕ ಗೆಲುವುನೊಂದಿಗೆ ಫೈನಲ್'ಗೆ ಬಾಂಗ್ಲಾ: ಕೊನೆಯ ಓವರ್'ನಲ್ಲಿ ಸಿಕ್ಸ್'ರ್ ಸಿಡಿಸಿ ಜಯ ತಂದಿತ್ತ ಮೊಹಮ್ಮದ್

By Suvarna Web DeskFirst Published Mar 16, 2018, 10:58 PM IST
Highlights

ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮದ್ ಉಲ್ಲಾ ಸ್ಪೋಟಕ ಆಟವಾಡಿ 18 ಎಸೆತಗಳಲ್ಲಿ 2 ಸಿಕ್ಸ್'ರ್ ಹಾಗೂ 3 ಬೌಂಡರಿಯೊಂದಿಗೆ ಅಜೇಯ 43 ರನ್ ಸಿಡಿಸಿದರು.

ಕೊಲಂಬೊ(ಮಾ.16): ಕುತೂಹಲ ಮೂಡಿಸಿದ ಪಂದ್ಯದಲ್ಲಿ ಆಲ್'ರೌಂಡರ್ ಮೊಹಮ್ಮದ್ ಉಲ್ಲಾ ಕೊನೆಯ ಓವರ್'ನ 5ನೇ ಎಸತೆದಲ್ಲಿ ಸಿಕ್ಸ್'ರ್ ಸಿಡಿಸುವುದರೊಂದಿಗೆ ಬಾಂಗ್ಲಾದೇಶ ಶ್ರೀಲಂಕಾ ವಿರುದ್ಧ 2 ವಿಕೇಟ್'ಗಳ ರೋಚಕ ಗೆಲುವು ಗಳಿಸಿ ಫೈನಲ್ ತಲುಪಿತು. ಈ ಜಯದೊಂದಿಗೆ ಬಾಂಗ್ಲಾದೇಶ  ಮಾ.18ರಂದು ನಡೆಯುವ ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೆಣಸಲಿದೆ.

ಶ್ರೀಲಂಕಾ ನೀಡಿದ 159 ರನ್'ಗಳ ಗುರಿಯನ್ನು ಬಾಂಗ್ಲಾದೇಶದವರು 19.5 ಓವರ್'ಗಳಲ್ಲಿ 8 ವಿಕೇಟ್ ನಷ್ಟಕ್ಕೆ ಗುರಿ ಮುಟ್ಟಿದರು. ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮದ್ ಉಲ್ಲಾ ಸ್ಪೋಟಕ ಆಟವಾಡಿ 18 ಎಸೆತಗಳಲ್ಲಿ 2 ಸಿಕ್ಸ್'ರ್ ಹಾಗೂ 3 ಬೌಂಡರಿಯೊಂದಿಗೆ ಅಜೇಯ 43 ರನ್ ಸಿಡಿಸಿದರು.  ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ (50), ವಿಕೇಟ್ ಕೀಪರ್ ರಹೀಮ್ (28) ಜಯದ ಪಾಲುದಾರರಲ್ಲಿ ಮುಖ್ಯರಾದರು.

ಟಾಸ್ ಗೆದ್ದ ಬಾಂಗ್ಲಾ ತಂಡ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿತು. ಕೀಪರ್ ಕೆಜೆ ಪೆರೇರಾ(61) ಹಾಗೂ ನಾಯಕ ಟಿಸಿ ಪೆರೇರಾ(58) ಅರ್ಧ ಶತಕಗಳ ಆಟದೊಂದಿಗೆ  20 ಓವರ್'ಗಳಲ್ಲಿ  7 ವಿಕೇಟ್ ನಷ್ಟಕ್ಕೆ 159 ರನ್ ಗುರಿ ನೀಡಿತ್ತು. ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ವಿಕೇಟ್'ಗಳ ಪತನವಾದರೂ ರೋಚಕ ಗೆಲುವು ಗಳಿಸಿತು.

 

ಸ್ಕೋರ್

ಶ್ರೀಲಂಕಾ 20 ಓವರ್'ಗಳಲ್ಲಿ 159/7

ಬಾಂಗ್ಲಾದೇಶ 19.4 ವರ್'ಗಳಲ್ಲಿ 160/8

ಫಲಿತಾಂಶ: ಬಾಂಗ್ಲಾಕ್ಕೆ 2 ವಿಕೇಟ್ ಗೆಲುವು

ಫೈನಲ್ ಪಂದ್ಯ: ಮಾ.18 ಭಾರತದ ವಿರುದ್ಧ

click me!