ಬಾಕ್ಸಿಂಗ್ ಡೇ ಟೆಸ್ಟ್’ಗೆ ಕ್ಷಣಗಣನೆ ಆರಂಭ

By Web Desk  |  First Published Dec 25, 2018, 9:17 AM IST

ಬಾಕ್ಸಿಂಗ್‌ ಡೇ ಟೆಸ್ಟ್‌ಗಳಲ್ಲಿ ಆಸ್ಪ್ರೇಲಿಯಾ ತಂಡ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದರೂ, ಈ ಬಾರಿ ಬಲಿಷ್ಠ ಭಾರತವನ್ನು ಎದುರಿಸುತ್ತಿರುವ ಕಾರಣ ತಂಡದ ಮೇಲೆ ಒತ್ತಡವಿದೆ. ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಪರ್ತ್’ನಲ್ಲಿ ನಡೆದ 2ನೇ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಇನ್ನೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು. 


ಮೆಲ್ಬರ್ನ್‌[ಡಿ.25]: ಒಂದು ವಾರದ ವಿಶ್ರಾಂತಿ ಬಳಿಕ ಭಾರತ-ಆಸ್ಪ್ರೇಲಿಯಾ ತಂಡಗಳು ಬುಧವಾರದಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿನ ಎಂಸಿಜಿ ಮೈದಾನ ಸರಣಿಯ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಉಭಯ ತಂಡಗಳು 4 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದ್ದು, ಈ ಪಂದ್ಯ ಗೆಲ್ಲುವ ಮೂಲಕ ಸರಣಿ ಸೋಲು ತಪ್ಪಿಸಿಕೊಳ್ಳಲು ಎದುರು ನೋಡುತ್ತಿವೆ.

ಟೀಂ ಇಂಡಿಯಾಗೆ ಧೋನಿ ಕಮ್‌ಬ್ಯಾಕ್- ಟ್ವಿಟರಿಗರ ಮೆಚ್ಚುಗೆ!

ಬಾಕ್ಸಿಂಗ್‌ ಡೇ ಟೆಸ್ಟ್‌ಗಳಲ್ಲಿ ಆಸ್ಪ್ರೇಲಿಯಾ ತಂಡ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದರೂ, ಈ ಬಾರಿ ಬಲಿಷ್ಠ ಭಾರತವನ್ನು ಎದುರಿಸುತ್ತಿರುವ ಕಾರಣ ತಂಡದ ಮೇಲೆ ಒತ್ತಡವಿದೆ. ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಪರ್ತ್’ನಲ್ಲಿ ನಡೆದ 2ನೇ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಇನ್ನೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆಸ್ಪ್ರೇಲಿಯಾದಲ್ಲಿ ಚೊಚ್ಚಲ ಸರಣಿ ಗೆಲುವಿನ ಕನಸು ಕಾಣುತ್ತಿರುವ ಭಾರತಕ್ಕೆ ಈ ಪಂದ್ಯದಲ್ಲೂ ಆಯ್ಕೆ ಗೊಂದಲ ಶುರುವಾಗಿದೆ. ಆರಂಭಿಕರಾದ ಕೆ.ಎಲ್‌.ರಾಹುಲ್‌ ಹಾಗೂ ಮುರಳಿ ವಿಜಯ್‌ ಇಬ್ಬರೂ ಲಯ ಕಳೆದುಕೊಂಡಿದ್ದಾರೆ. ಪೃಥ್ವಿ ಶಾ ಗಾಯಗೊಂಡು ತವರಿಗೆ ವಾಪಸಾದ ಕಾರಣ ಮಯಾಂಕ್‌ ಅಗರ್‌ವಾಲ್‌ ಆಡುವುದು ಬಹುತೇಕ ಖಚಿತವಾಗಿದೆ. ಮತ್ತೊಂದು ಸ್ಥಾನವನ್ನು ವಿಜಯ್‌ ಇಲ್ಲವೇ ರಾಹುಲ್‌ಗೆ ನೀಡುವ ಸಾಧ್ಯತೆ ಇದೆ. ಪಾರ್ಥೀವ್‌ ಪಟೇಲ್‌ ಇಲ್ಲವೇ ಹನುಮ ವಿಹಾರಿಯನ್ನು ಆರಂಭಿಕನನ್ನಾಗಿ ಆಡಿಸಬೇಕು ಎನ್ನುವ ಸಲಹೆಗಳು ಸಹ ಕೇಳಿಬಂದಿವೆ.

ಟಿ20 ಸರಣಿಯಿಂದ ಮನೀಶ್ ಪಾಂಡೆಗೆ ಕೊಕ್-ಟ್ವಿಟರಿಗರ ಆಕ್ರೋಶ!

Tap to resize

Latest Videos

ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌ ಮಧ್ಯಮ ಕ್ರಮಾಂಕದ ಬಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡದ ಸಮತೋಲನ ಹೆಚ್ಚಿಸಲು ನಿರೀಕ್ಷೆ ಹುಟ್ಟಿಸಿದ್ದಾರೆ. ಪಾಂಡ್ಯ ಸೇರ್ಪಡೆಯಿಂದ ತಂಡ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸಲು ಅನುಕೂಲವಾಗಲಿದೆ.

ರೋಹಿತ್‌ ಶರ್ಮಾ ಫಿಟ್ನೆಸ್‌ ಬಗ್ಗೆ ಇನ್ನೂ ಖಚಿತತೆ ಇಲ್ಲ. ಇನ್ನು ಆರ್‌.ಅಶ್ವಿನ್‌ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಆಡುವ ಹನ್ನೊಂದರಲ್ಲಿ ಜಡೇಜಾಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಬೌಲಿಂಗ್‌ ಸಂಯೋಜನೆ ಬಗ್ಗೆ ಭಾರತ ಇನ್ನೂ ಯಾವುದೇ ಸುಳಿವು ನೀಡಿಲ್ಲ.

ಕಿವಿಸ್, ಆಸಿಸ್ ODIs,T20 ಸರಣಿಗೆ ಟೀಂ ಇಂಡಿಯಾ ಪ್ರಕಟ!

ಮತ್ತೊಂದೆಡೆ ಆಸ್ಪ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಸ್ಪಿನ್ನರ್‌ ನೇಥನ್‌ ಲಯನ್‌ ಅತ್ಯುತ್ತಮ ಲಯದಲ್ಲಿದ್ದು ಮತ್ತೊಮ್ಮೆ ಭಾರತೀಯರಿಗೆ ಅಡ್ಡಿಯಾದರೆ ಅಚ್ಚರಿಯಿಲ್ಲ. ಆಸ್ಪ್ರೇಲಿಯಾ ತನ್ನ ಬ್ಯಾಟಿಂಗ್‌ ಪ್ರದರ್ಶನದಲ್ಲಿ ಸುಧಾರಣೆ ಕಾಣಲು ಎದುರು ನೋಡುತ್ತಿದೆ.

ಸಂಭವನೀಯ ತಂಡಗಳು

ಭಾರತ: ಮುರಳಿ ವಿಜಯ್‌, ಮಯಾಂಕ್‌ ಅಗರ್‌ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮದ್‌ ಶಮಿ, ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ.

ಆಸ್ಪ್ರೇಲಿಯಾ: ಮಾರ್ಕಸ್‌ ಹ್ಯಾರಿಸ್‌, ಆ್ಯರೋನ್‌ ಫಿಂಚ್‌, ಉಸ್ಮಾನ್‌ ಖವಾಜ, ಶಾನ್‌ ಮಾರ್ಷ್, ಪೀಟರ್‌ ಹ್ಯಾಂಡ್ಸ್‌ಕಂಬ್‌, ಟ್ರಾವಿಸ್‌ ಹೆಡ್‌, ಟಿಮ್‌ ಪೈನ್‌ (ನಾಯಕ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್, ನೇಥನ್‌ ಲಯನ್‌, ಜೋಶ್‌ ಹೇಜಲ್‌ವುಡ್‌.

ಪಂದ್ಯ ಆರಂಭ: ಬೆಳಗ್ಗೆ 5ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್‌

ಪಿಚ್‌ ರಿಪೋರ್ಟ್‌

ಮೆಲ್ಬರ್ನ್‌ ಪಿಚ್‌ ಹಸಿರು ಪಿಚ್‌ ಆಗಿದ್ದರೂ, ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ನೆರವು ದೊರೆಯುವ ನಿರೀಕ್ಷೆ ಇದೆ ಎಂದು ಕ್ಯುರೇಟರ್‌ ಹೇಳಿದ್ದಾರೆ. ಹೀಗಾಗಿ ಭಾರತ, ಪತ್‌ರ್‍ನಲ್ಲಿ ತಂಡದ ಆಯ್ಕೆಯಲ್ಲಿ ಆದ ಎಡವಟ್ಟು ಮತ್ತೆ ಆಗದಂತೆ ಎಚ್ಚರ ವಹಿಸಬೇಕಿದೆ. ಸ್ಪಿನ್ನರ್‌ಗಳಿಗೂ ಪಿಚ್‌ ಸಹಕಾರ ನೀಡಲಿದ್ದು, ಆಸ್ಪ್ರೇಲಿಯಾ ಲಯನ್‌ರನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

click me!