ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್‌!

By Web Desk  |  First Published Aug 15, 2019, 1:15 PM IST

ಮಾಜಿ ಬಾಕ್ಸಿಂಗ್ ಪಟು ಮೈಕ್ ಟೈಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ದಿವಾಳಿಯಾಗಿದ್ದ ಟೈಸನ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಈ ಬಾರಿ ಟೈಸನ್ ಕೈ ಹಿಡಿದಿದ್ದು ಗಾಂಜಾ. 


ಕ್ಯಾಲಿಫೋರ್ನಿಯಾ(ಆ.15): ಮಾಜಿ ಬಾಕ್ಸಿಂಗ್ ವಿಶ್ವಚಾಂಪಿಯನ್ ಮೈಕ್ ಟೈಸನ್ ವಿದಾಯ ಹೇಳಿದರೂ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ವಿದಾಯದ ಬಳಿಕವೂ ಒಂದಲ್ಲ ಒಂದು ವಿವಾದವನ್ನು ಟೈಸನ್ ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ದುಬಾರಿ ಗಾಂಜಾ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೈಕ್ ಟೈಸನ್ ಸೇರಿದಂತೆ ದಿಗ್ಗಜ 6 ಸಸ್ಯಾಹಾರಿ ಕ್ರೀಡಾಪಟುಗಳು!

Tap to resize

Latest Videos

ಮಾಜಿ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಮೈಕ್‌ ಟೈಸನ್‌ ತಿಂಗಳಿಗೆ  28 ಲಕ್ಷ (40,000 ಡಾಲರ್‌) ಮೌಲ್ಯದ ಗಾಂಜಾ ಸೇದುತ್ತಾರಂತೆ. ಇಂತಹ ಬೆಚ್ಚಿಬೀಳುವ ರಹಸ್ಯವನ್ನು ಸಂದರ್ಶನವೊಂದರಲ್ಲಿ ಸ್ವತಃ ಟೈಸನ್‌ ಬಿಚ್ಚಿಟ್ಟಿದ್ದಾರೆ. 40 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆಯುವ ಟೈಸನ್‌ ತಿಂಗಳಿಗೆ 35 ಲಕ್ಷ ಮೌಲ್ಯದ ಗಾಂಜಾ ಮಾರುತ್ತಾರೆ. ಈ ಹಿಂದೆ ಟೈಸನ್‌ ಅವರನ್ನು ದಿವಾಳಿಯೆಂದು ಘೋಷಿಸಲಾಗಿತ್ತು. ಆದರೆ ಗಾಂಜಾ ವ್ಯಾಪಾರದಿಂದ ಅವರ ಅದೃಷ್ಠ ಖುಲಾಯಿಸಿದೆ. ಕ್ಯಾಲಿಫೋರ್ನಿಯಾದಲ್ಲಿ ಗಾಂಜಾ ಬೆಳೆಯುವುದು ಕಾನೂನು ಬಾಹಿರವಲ್ಲ.

click me!