ಕ್ರಿಕೆಟ್‌ನಲ್ಲಿ ಲೆದರ್‌ ಚೆಂಡಿಗೆ ನಿಷೇಧ; ವೆಜ್‌ ಬಾಲ್‌ ಬಳಕೆ!

By Web DeskFirst Published Aug 15, 2019, 12:58 PM IST
Highlights

ಕ್ರಿಕೆಟ್ ಆಟಕ್ಕೆ ಲೆದರ್ ಬಾಲ್ ಬಳಸಲಾಗುತ್ತೆ. ಕ್ರಿಕೆಟ್ ಶುರುವಾದ ಸಮಯದಿಂದಲೂ ಇಲ್ಲೀವರೆಗೂ ಲೆದರ್ ಬಾಲ್ ಬಳಕೆ ಮಾಡುತ್ತಿದೆ.  ಇದೀಗ ಲೆದರ್ ಚೆಂಡಿಗೆ ನಿಷೇಧ ಹೇರಿ ಇದೀಗ ಪ್ಯೂರ್ ವೆಜ್ ಬಾಲ್ ಬಳಕೆಗೆ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ಮುಂದಾಗಿದೆ.

ಲಂಡನ್‌(ಆ.15): ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಒಂದಾದ ಮೇಲೊಂದು ಪ್ರಯೋಗಗಳು ನಡೆಯುತ್ತಲೇ ಇವೆ. ಇಂಗ್ಲೆಂಡ್‌ನ ಇಯರ್‌ಲೇ ಕ್ರಿಕೆಟ್‌ ಕ್ಲಬ್‌ ಸಾಂಪ್ರದಾಯಿಕ ಲೆದರ್‌ ಚೆಂಡಿನ (ಪ್ರಾಣಿ ಚರ್ಮದಿಂದ ತಯಾರಿಸಿದ ಚೆಂಡು) ಬದಲಿಗೆ ವೆಜ್‌/ವೇಗನ್‌ ಚೆಂಡು ಬಳಕೆ ಮಾಡುತ್ತಿದೆ. ಲೆದರ್‌ ಚೆಂಡಿನಷ್ಟೇ ಪರಿಣಾಮಕಾರಿಯಾದ ರಬ್ಬರ್‌ ಚೆಂಡನ್ನು ಬಳಸಲಾಗುತ್ತಿದೆ. ಲೆದರ್‌ ಚೆಂಡಿಗಿಂತ ರಬ್ಬರ್‌ ಚೆಂಡು ಕೊಂಚ ಹೆಚ್ಚು ಪುಟಿದೇಳಲಿದ್ದು, ಸ್ಪಿನ್ನರ್‌ಗಳಿಗೆ ಬೌಲ್‌ ಮಾಡಲು ಸ್ಪಷ್ಟಕಷ್ಟವೆನಿಸುತ್ತದೆ ಎನ್ನಲಾಗಿದೆ. ಆದರೂ ತಂಡದ ಆಟಗಾರರಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು, ಇತರೆ ಕ್ಲಬ್‌ಗಳು ಶೀಘ್ರ ರಬ್ಬರ್‌ ಚೆಂಡಿನ ಬಳಕೆ ಆರಂಭಿಸಲಿವೆ ಎನ್ನುವ ನಂಬಿಕೆ ಇದೆ ಎಂದು ಗ್ಯಾರಿ ಹೇಳಿದ್ದಾರೆ.

ಇದನ್ನೂ ಓದಿ: ಸ್ವತಂತ್ರ ಭಾರತದ 7 ದಶಕಗಳಲ್ಲಿ 7 ಕ್ರೀಡಾ ಸಾಧನೆಯ ಹಿನ್ನೋಟ!

ಕ್ಲಬ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಗ್ಯಾರಿ ಶ್ಯಾಕ್‌ಲೇಡಿ ಕೆಲ ವರ್ಷಗಳ ಹಿಂದೆ ಶಾಕಾಹಾರಿಯಾಗಿ ಬದಲಾಗಿದ್ದರು. ಅವರ ತಂಡದ ಆಟಗಾರರಿಗೆ ವೇಗನ್‌ ಟೀ (ಹಸುವಿನ ಉತ್ಪನ್ನಗಳನ್ನು ಬಳಸದ) ಸಹ ಪೂರೈಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 

click me!