
ಮಿಯಾಮಿ(ಮಾ.20): ಉತ್ತಮ ಲಯದಲ್ಲಿರುವ ಭಾರತದ ಅಗ್ರ ಟೆನಿಸ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್, ಮಿಯಾಮಿ ಮಾಸ್ಟರ್ಸ್ ಅರ್ಹತಾ ಹಂತದ ಅಂತಿಮ ಸುತ್ತಿಗೇರಿದ್ದಾರೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪ್ರಜ್ನೇಶ್, ಸ್ಪೇನ್‌ನ ಏಡ್ರಿಯಾನ್ ಮೆನೆಂಡೆಜ್ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ: ಇಂಡೋ-ಪಾಕ್ ಟೆನ್ಶನ್: ಭಾರತದಿಂದ ಟೆನಿಸ್ ಟೂರ್ನಿಗಳು ಸ್ಥಳಾಂತರ!
ಪ್ರಧಾನ ಸುತ್ತಿಗೇರಲು ಪ್ರಜ್ನೇಶ್, ಬ್ರಿಟನ್‌ನ ಜೇ ಕ್ಲಾರ್ಕ್ ವಿರುದ್ಧ ಗೆಲ್ಲಬೇಕಿದೆ. ಇದೇ ವೇಳೆ ಭಾರತದ ಮತ್ತೊಬ್ಬ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಇಟಲಿಯ ಲೊರೆನ್ಜೊ ಸೆನೆಗೊ ವಿರುದ್ಧ 4-6, 1-6 ಸೆಟ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಪುರುಷರ ಡಬಲ್ಸ್ ಪ್ರಧಾನ ಸುತ್ತಿನಲ್ಲಿ ರೋಹನ್ ಬೋಪಣ್ಣ ಕೆನಡಾದ ಡೆನಿಸ್ ಶಾಪೊವಲೋವ್ ಜತೆ ಕಣಕ್ಕಿಳಿಯಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.