ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾಗೆ ಡಬಲ್ ಶಾಕ್!

By Web DeskFirst Published Mar 20, 2019, 9:06 AM IST
Highlights

ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಪರದಾಡಿತ್ತು. ಆದರೆ ವಿಶ್ವಕಪ್ ಟೂರ್ನಿಗೆ ಈ ಇಬರೂ ಕ್ರಿಕೆಟಿಗರು ಮತ್ತೆ ತಂಡ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತಿಬ್ಬರು ಕ್ರಿಕೆಟಿಗರು ತಂಡದಿಂದ ಹೊರಬೀಳೋ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ವಿವರ.

ಮೆಲ್ಬರ್ನ್‌(ಮಾ.20): ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ತಂಡಕ್ಕೆ ಅನುಭವಿ ವೇಗಿಗಳಾದ ಮಿಚೆಲ್‌ ಸ್ಟಾರ್ಕ್ ಹಾಗೂ ಜೋಶ್‌ ಹೇಜಲ್‌ವುಡ್‌ರ ಸೇವೆ ಅಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಇಬ್ಬರೂ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಆಯ್ಕೆ ಸಮಿತಿಯಲ್ಲಿ ಗೊಂದಲ ಶುರುವಾಗಿದೆ. 

ಇದನ್ನೂ ಓದಿ: ವಿಶ್ವಕಪ್ 2019: ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದ ICC

ಈ ಇಬ್ಬರು ಹೊರಬಿದ್ದರೆ ಯುವ ವೇಗಿ ಜಾಯಿ ರಿಚರ್ಡ್‌ಸನ್‌ಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಭಾರತ ವಿರುದ್ಧ ಸರಣಿಗಳಲ್ಲಿ ರಿಚರ್ಡ್‌ಸನ್‌ ಉತ್ತಮ ಪ್ರದರ್ಶನ ತೋರಿದ್ದರು. ಇದೇ ವೇಳೆ ಪ್ಯಾಟ್‌ ಕಮಿನ್ಸ್‌, ನೇಥನ್‌ ಕೌಲ್ಟರ್‌ ನೈಲ್‌, ಕೇನ್‌ ರಿಚರ್ಡ್‌ಸನ್‌, ಜೇಸನ್‌ ಬೆಹ್ರೆನ್‌ಡೊಫ್‌ರ್‍ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!

ನಿಷೇಧದ ಶಿಕ್ಷೆ ಮುಗಿಸಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸಿಸ್ ತಂಡ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಸದ್ಯ ಐಪಿಎಲ್ ಟೂರ್ನಿ ಆಡಲಿರುವ ಸ್ಮಿತ್ ಹಾಗೂ ವಾರ್ನರ್ ಬಳಿಕ ವಿಶ್ವಕಪ್ ಟೂರ್ನಿ ಆಡಲಿದ್ದಾರೆ. ಆದರೆ ತಂಡದ ಪ್ರಮುಖ ವೇಗಿಗಳು ಅಲಭ್ಯರಾಗೋ ಸಾಧ್ಯತೆ ಇರೋದರಿಂದ ಆಸಿಸ್‌ಗೆ ಮತ್ತೆ ತಲೆನೋವು ಶುರುವಾಗಿದೆ.

click me!