16 ವರ್ಷಗಳ ದ್ರಾವಿಡ್ ದಾಖಲೆ ಉಡೀಸ್ ಮಾಡಿದ ಕೊಹ್ಲಿ..!

By Web DeskFirst Published Dec 27, 2018, 2:32 PM IST
Highlights

ಈ ಮೊದಲು ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ 2002ರ ಕ್ಯಾಲೆಂಡರ್ ವರ್ಷದಲ್ಲಿ 1137 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಮೊಯಿಂದರ್ ಅಮರ್’ನಾಥ್ 1983ರಲ್ಲಿ 1065 ರನ್ ಬಾರಿಸಿದ್ದರು.

ಮೆಲ್ಬರ್ನ್[ಡಿ.27]: ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಾ ಸಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೆಲ್ಬರ್ನ್ ಟೆಸ್ಟ್’ನ ಎರಡನೇ ದಿನ 16 ವರ್ಷಗಳಿಂದ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲೇ ಸುವರ್ಣ ನ್ಯೂಸ್.ಕಾಂ ಕೊಹ್ಲಿ ದಾಖಲೆ ಬಗ್ಗೆ ಸುದ್ದಿ ಪ್ರಕಟಿಸಿತ್ತು: ಮೆಲ್ಬರ್ನ್ ಟೆಸ್ಟ್: ದ್ರಾವಿಡ್‌ ದಾಖಲೆ ಮುರೀತಾರಾ ವಿರಾಟ್‌?

ಹೌದು, ಕ್ರಿಕೆಟ್ ವೃತ್ತಿಜೀವನದಲ್ಲಿ ಅತ್ಯದ್ಭುತ ಫಾರ್ಮ್’ನಲ್ಲಿರುವ ವಿರಾಟ್ ಕೊಹ್ಲಿ ಮೆಲ್ಬರ್ನ್ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ 82 ರನ್ ಬಾರಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ 1138 ರನ್ ಪೂರೈಸಿದ್ದಾರೆ. ಈ ಮೂಲಕ ಭಾರತ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೊದಲು ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ 2002ರ ಕ್ಯಾಲೆಂಡರ್ ವರ್ಷದಲ್ಲಿ 1137 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಮೊಯಿಂದರ್ ಅಮರ್’ನಾಥ್ 1983ರಲ್ಲಿ 1065 ರನ್ ಬಾರಿಸಿದ್ದರು.

ಪೂಜಾರ ಶತಕ-ಕೊಹ್ಲಿ ದಾಖಲೆಯ ಅರ್ಧಶತಕ-ಆಸಿಸ್‌ಗೆ ನಡುಕ

ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ಟಾಪ್ 5 ಬ್ಯಾಟ್ಸ್’ಮನ್’ಗಳ ಪಟ್ಟಿ ಇಲ್ಲಿದೆ ನೋಡಿ

ಆಟಗಾರ ರನ್ ವರ್ಷ
ಗ್ರೇಮ್ ಸ್ಮಿತ್ 1212 2008
ವಿವ್ ರಿಚರ್ಡ್’ಸನ್ 1154 1976
ವಿರಾಟ್ ಕೊಹ್ಲಿ 1138 2018*
ರಾಹುಲ್ ದ್ರಾವಿಡ್ 1137 2002
ಮೊಯಿಂದರ್ ಅಮರ್’ನಾಥ್ 1065 1983

ವಿರಾಟ್ ಕೊಹ್ಲಿ ಕೇವಲ 18 ರನ್’ಗಳ ಅಂತರದಲ್ಲಿ ಶತಕ ವಂಚಿತರಾದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್’ನಲ್ಲಿ ಥರ್ಡ್’ಮ್ಯಾನ್ ಸ್ಥಾನದಲ್ಲಿ ನಿಂತಿದ್ದ ಆ್ಯರೋನ್ ಫಿಂಚ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

click me!