
ಮೆಲ್ಬರ್ನ್(ಡಿ.27): ಚೆಂಡು ವಿರೂಪಗೊಳಿಸಲು ಉತ್ತೇಜಿಸಿದ್ದೇ ಡೇವಿಡ್ ವಾರ್ನರ್. ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಮತ್ತು ಮೌಲ್ಯ ಹೆಚ್ಚಿಸಿಕೊಳ್ಳಲು ಚೆಂಡು ವಿರೂಪಕ್ಕೆ ಪ್ರಯತ್ನಿಸಬೇಕಾಯಿತು ಎಂದು ನಿಷೇಧಿತ ಆಸೀಸ್ ಕ್ರಿಕೆಟಿಗ ಬೆನ್ ಕ್ರಾಫ್ಟ್ ಹೇಳಿದ್ದಾರೆ.
ಚೆಂಡು ವಿರೂಪ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ನಾಯಕ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ಒಂದು ವರ್ಷ ನಿಷೇಧ ಹಾಗೂ ಬೆನ್ ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಹೇರಲಾಗಿತ್ತು. ‘ಪಂದ್ಯದಲ್ಲಿ ನಾವಿದ್ದ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಈ ವೇಳೆ ಚೆಂಡು ವಿರೂಪಗೊಳಿಸಿ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವಂತೆ ವಾರ್ನರ್ ಉತ್ತೇಜಿಸಿದರು’ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದ್ದಾರೆ.
2018ರ ಮಾರ್ಚ್’ನಲ್ಲಿ ಕೇಪ್’ಟೌನ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆನ್ ಕ್ರಾಫ್ಟ್ ಚೆಂಡನ್ನು ಸ್ಯಾಂಡ್ ಪೇಪರ್’ನಿಂದ ಉಜ್ಜಿ ಚೆಂಡು ವಿರೂಪಗೊಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.