
ರಷ್ಯಾ(ಜೂನ್.13): ಫಿಫಾ ವಿಶ್ವಕಪ್ ಟೂರ್ನಿ 2018ರ ಲಾಂಛನ ಹಲವು ವಿಶೇಷತೆಗಳನ್ನೊಳಗೊಂಡಿದೆ. ವಿನೋದ, ಉಲ್ಲಾಸ, ಆಕರ್ಷಣೆ ಹಾಗೂ ಆತ್ಮವಿಶ್ವಾಸದ ಪ್ರತೀಕದಂತಿರುವ ತೋಳವನ್ನು ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನ ಲಾಂಛನವನ್ನಾಗಿ ರಷ್ಯಾದ ಸಾರ್ವಜನಿಕರು ಆಯ್ಕೆ ಮಾಡಿದರು. ಇದಕ್ಕೆ ‘ಜಬಿವಿಕಾ’ ಎಂದು ನಾಮಕರಣ ಸಹ ಮಾಡಲಾಯಿತು.
ಜಬಿವಿಕಾ ಎಂದರೆ ರಷ್ಯಾ ಭಾಷೆಯಲ್ಲಿ ‘ಗೋಲು ಗಳಿಸುವ ಚಾಲಕಿ’ ಎಂಬ ಅರ್ಥವಿದೆ. ಎಕ್ತರೀನಾ ಬೊಚಾರೊವಾ ಎಂಬ ವಿದ್ಯಾರ್ಥಿನಿ ಲಾಂಛನ ವಿನ್ಯಾಸ ಮಾಡಿದ್ದು ಶೇ.೫೩ರಷ್ಟು ಮತಗಳು ಲಭಿಸಿದ್ದವು. ಒಂದು ತಿಂಗಳಿಗೂ ಅಧಿಕ ಕಾಲ ನಡೆದಿದ್ದ ವೋಟಿಂಗ್ ಪ್ರಕ್ರಿಯೆಯಲ್ಲಿ 11 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಫಿಫಾದ ಅಧಿಕೃತ ವೆಬ್‌ಸೈಟ್ ಹಾಗೂ ರಷ್ಯಾದ ಚಾನೆಲ್ 1 ಮೂಲಕ ಮತದಾನ ಪ್ರಕ್ರಿಯೆ ನಡೆದಿತ್ತು. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅಧಿಕೃತ ಲಾಂಛನ ಆಯ್ಕೆಗೆ ನಡೆದ ಅತ್ಯಂತ ಸೃಜನಶೀಲ ಮತ್ತು ಆಕರ್ಷಕ ಪ್ರಕ್ರಿಯೆ ಎಂಬ ಖ್ಯಾತಿಯನ್ನು ಈ ವೋಟಿಂಗ್ ತನ್ನದಾಗಿಸಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.