ಬಾಂಗ್ಲಾ ಏಷ್ಯಾ ಕಪ್ ಗೆಲ್ಲಲು ಈ ಭಾರತೀಯ ಮಹಿಳೆ ಕಾರಣ..!

First Published Jun 12, 2018, 6:46 PM IST
Highlights

ಬಾಂಗ್ಲಾ ವನಿತೆಯರು ಏಷ್ಯಾ ಕಪ್ ಗೆಲ್ಲಲು ಕಾರಣ ಈ ಭಾರತೀಯ ಆಟಗಾರ್ತಿ

ಮಾಜಿ ಆಟಗಾರ್ತಿ ಅಂಜು ಜೈನ್ ಬಾಂಗ್ಲಾ ಮಹಿಳಾ ತಂಡದ ಪ್ರಧಾನ ಕೋಚ್

ತಂಡವನ್ನು ಸಿದ್ದಗೊಳಿಸಿದ ಪರಿಯ ಹಿಂದಿದೆ ರೋಚಕ ಕತೆ

ತಂಡದ ವೈಫಲ್ಯ ಗಮನಿಸಿ ತರಬೇತಿ ನೀಡಿದ ಅಂಜು ಜೈನ್ 

ಢಾಕಾ[ಜೂ.12]: ಭಾರತ ಮಹಿಳೆ ತಂಡ ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರು ವಿಕೆಟ್ ಗಳಿಂದ ಸೋಲು ಕಂಡಿತ್ತು. ಆದರೆ ಬಾಂಗ್ಲಾದೇಶದ ಗೆಲುವಿನ ಹಿಂದೆ ಭಾರತೀಯ ಮಾಜಿ ಆಟಗಾರ್ತಿಯ ಶ್ರಮವಿದೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ. 

ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು, ಇದರ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಅಂಜು ಜೈನ್ ಅವರ ಪ್ರರಿಶ್ರಮ ಹೆಚ್ಚಿದೆ. ಅಂಜು ಜೈನ್ ಕಳೆದ ಮೇ 21ರಂದು ಬಾಂಗ್ಲಾದೇಶದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದರು. 

ಈ ಕುರಿತು ಮಾತನಾಡಿರುವ ಅಂಜು ಜೈನ್, ಬಾಂಗ್ಲಾದೇಶ ಏಷ್ಯಾಕಪ್ ಟ್ರೋಫಿ ಗೆದ್ದಿರುವುದು ತುಂಬಾ ಸಂತೋಷವನ್ನು ತಂದಿದೆ. ದಕ್ಷಿಣ ಆಫ್ರಿಕಾದ ಸರಣಿ ನಂತರ ತಾವು ಆಟಗಾರರ ನೂನ್ಯತೆಗಳನ್ನು ಗಮನಿಸಿ, ನಂತರ ಅದಕ್ಕೆ ತಕ್ಕಂತೆ ತಂಡವನ್ನು ಸಿದ್ಧಗೊಳಿಸಿದ್ದಾಗಿ ಹೇಳಿದ್ದಾರೆ. 

ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಅಂಜು ಜೈನ್ ಭಾರತ ಪರ 8 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 441 ರನ್ ಮತ್ತು ಏಕದಿನ ಪಂದ್ಯದಲ್ಲಿ 1729 ರನ್ ಬಾರಿಸಿದ್ದಾರೆ. 2012ರ ವಿಶ್ವಕಪ್ ಟಿ20 ಮತ್ತು 2013ರ ವಿಶ್ವಕಪ್ ಟೂರ್ನಿಗಳಿಗೆ ಟೀಂ ಇಂಡಿಯಾದ ಕೋಚ್ ಆಗಿಯೂ ಅಂಜು ಜೈನ್ ಕಾರ್ಯನಿರ್ವಹಿಸಿದ್ದರು.

click me!