2018ರ ಫಿಫಾ ವಿಶ್ವಕಪ್ ಟೂರ್ನಿ ಇದೀಗ ಕುತೂಹಲಗಳ ಸಾಗರವಾಗಿದೆ. ಯಾರು ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೆ, ಯಾರು ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲಿದ್ದಾರೆ ಅನ್ನೋ ಚರ್ಚೆಗಳು ಸಾಮಾನ್ಯವಾಗಿದೆ. ಹಾಗಾದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿರೋ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ವಿವರ.
ರಷ್ಯಾ(ಜೂನ್.13): ರಷ್ಯಾದಲ್ಲಿ ನಡೆಯಲಿರುವ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಬಾರಿ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ 5 ತಂಡಗಳ ನಡುವೆ ನೇರಾ ನೇರಾ ಸ್ಪರ್ಧೆ ಎರ್ಪಟ್ಟಿದೆ. ಕಣದಲ್ಲಿರುವ 32 ತಂಡಗಳು ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಲಿದೆ.
2018ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿರೋ ಕೆಲ ಆಟಗಾರರ ಮೇಲೆ ಬಾರಿ ನಿರೀಕ್ಷೆ ಇದೆ. ಇವರ ಪ್ರದರ್ಶನದ ಮೇಲೆ ತಂಡದ ಫಲಿತಾಂಶ ನಿರ್ಧಾರವಾಗಲಿದೆ. ಹಾಗಾದರ ಆ 6 ಆಟಗಾರರು ಹಾಗೂ ಅವರ ತಂಡದ ಕುರಿತ ವಿವರ ಇಲ್ಲಿದೆ.
undefined
ಲಿಯೋನಲ್ ಮೆಸ್ಸಿ(ಅರ್ಜೆಂಟೀನಾ):
ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಮೇಲೆ ಬಾರಿ ನಿರೀಕ್ಷೆ ಇದೆ. 2017-18ರ ಸಾಲಿನಲ್ಲಿ ಮೆಸ್ಸಿ ಬರೋಬ್ಬರಿ 45 ಗೋಲು ಸಿಡಿಸಿದ್ದಾರೆ. ಈ ಮೂಲಕ ಮೆಸ್ಸಿ ಅತ್ಯುತ್ತಮ ಲಯದಲ್ಲಿರೋದನ್ನ ಸಾಬೀತುಪಡಿಸಿದ್ದಾರೆ. ಹೀಗಾಗಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ ಗೋಲಿನ ಸುರಿಮಳೆ ಸುರಿಸಲಿದ್ದಾರೆ.
ನೇಯ್ಮರ್(ಬ್ರೆಜಿಲ್):
ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಗಾಯಗೊಂಡು ಬ್ರೆಜಿಲ್ ತಂಡದ ಆತಂಕಕ್ಕೆ ಕಾರಣವಾಗಿದ್ದ ನಾಯಕ ನೇಯ್ಮರ್ ಇದೀಗ ಚೇತರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಆಸ್ಟ್ರಿಯಾ ವಿರುದ್ದದ ಪಂದ್ಯದಲ್ಲಿ ಗೋಲು ಸಿಡಿಸೋ ಮೂಲಕ, ವಿಶ್ವಕಪ್ ಹೋರಾಟಕ್ಕೆ ಸಂಪೂರ್ಣವಾಗಿ ರೆಡಿಯಾಗಿದ್ದಾರೆ. ನೇಯ್ಮರ್ ಪ್ರದರ್ಶನದ ಮೇಲೆ ಬ್ರೆಜಿಲ್ ಸೋಲು-ಗೆಲುವು ನಿರ್ಧಾರವಾಗಲಿದೆ.
ಟೋನಿ ಕ್ರೂಸ್(ಜರ್ಮನಿ):
ಜರ್ಮನಿ ತಂಡದ ಮಿಡ್‌ಫೀಲ್ಡರ್ ಟೋನಿ ಕ್ರೂಸ್, 2014ರ ಫಿಫಾ ವಿಶ್ವಕಪ್ ಗೆಲುವಿನಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು. ಈ ಬಾರಿಯೂ ಜರ್ಮನಿ ತಂಡಕ್ಕೆ ಗೆಲುವಿನ ಕೀರಿಟ ತೊಡಿಸಲು ಪಣತೊಟ್ಟಿರುವ ಕ್ರೂಸ್, ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಸ್ಕೋ(ಸ್ಪೇನ್):
ಸ್ಪೇನ್ ತಂಡದ ಸ್ಟಾರ್ ಮಿಡ್‌ಫೀಲ್ಡರ್ ಇಸ್ಕೋ(ಫ್ರಾನ್ಸಿಸ್ಕೋ ರೋಮ್ ಅಲರ್ಕಾನ್) ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಲಾ ಲೀಗ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುತ್ತಿರುವ ಇಸ್ಕೋ, ತಂಡಕ್ಕೆ ಮುನ್ನಡೆ ತಂದುಕೊಡೋದರಲ್ಲಿ ಎತ್ತಿದ ಕೈ.
ಕ್ರಿಸ್ಟಿಯಾನೋ ರೋನಾಲ್ಡೋ(ಪೋರ್ಚುಗಲ್):
ಪೋರ್ಚುಗಲ್ ತಂಡದಲ್ಲಿ ಹಲವು ಸ್ಟಾರ್ ಪ್ಲೇಯರ್‌ಗಳಿದ್ದರೂ ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಅದರಲ್ಲೂ ಕ್ರಿಸ್ಟಿಯಾನೋ ರೋನಾಲ್ಡೋ ಈ ಬಾರಿ ಪೊರ್ಚುಗಲ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡೋ ವಿಶ್ವಾಸದಲ್ಲಿದ್ದಾರೆ. ಓಟ್ಟು 150 ಪಂದ್ಯದಿಂದ 81 ಗೋಲು ಸಿಡಿಸಿ ಅಗ್ರಸ್ಥಾನದಲ್ಲಿರುವ ರೋನಾಲ್ಡೋ, ಹೊಸ ಹುಮ್ಮಸ್ಸಿನಲ್ಲಿದ್ದಾರೆ.
ಲೂಯಿಸ್ ಸ್ವಾರೇಜ್(ಉರುಗ್ವೆ):
2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಉರುಗ್ವೆ ತಂಡ ಬಲಿಷ್ಠ ತಂಡಗಳಿಗೆ ನೀರು ಕುಡಿಸಿತ್ತು. ಇದಕ್ಕೆ ಮುಖ್ಯ ಕಾರಣ ತಂಡದ ಫಾರ್ವಡ್ ಪ್ಲೇಯರ್ ಲೂಯಿಸಿ ಸ್ವಾರೇಜ್. 98 ಪಂದ್ಯದಿಂದ 51 ಗೋಲು ಸಿಡಿಸಿರುಲ ಸ್ವಾರೇಜ್ 2018ರ ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ರಚಿಸೋ ವಿಶ್ವಾಸದಲ್ಲಿದ್ದಾರೆ.