ಏಷ್ಯಾ ಬಾಕ್ಸಿಂಗ್: 5ನೇ ಚಿನ್ನ ಗೆಲ್ಲಲು ಮೇರಿಗೆ ಇನ್ನೊಂದೆ ಹೆಜ್ಜೆ ಬಾಕಿ

Published : Nov 07, 2017, 09:34 PM ISTUpdated : Apr 11, 2018, 12:41 PM IST
ಏಷ್ಯಾ ಬಾಕ್ಸಿಂಗ್: 5ನೇ ಚಿನ್ನ ಗೆಲ್ಲಲು ಮೇರಿಗೆ ಇನ್ನೊಂದೆ ಹೆಜ್ಜೆ ಬಾಕಿ

ಸಾರಾಂಶ

ಇಂದು ನಡೆದ ಸೆಮಿಫೈನಲ್‌'ನಲ್ಲಿ ಜಪಾನ್ ಸುಬಾಸಾ ಕೌಮುರಾ ವಿರುದ್ಧ 5-0 ಅಂತರದಿಂದ ಜಯ ಗಳಿಸುವ ಮೂಲಕ ಫೈನಲ್‌'ಗೇರಿದ ಮೇರಿ, 48 ಕೆಜಿ ವಿಭಾಗದಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ವಿಯೆಟ್ನಾಂ(ನ.07): 5 ಬಾರಿ ವಿಶ್ವ ಚಾಂಪಿಯನ್ ಎಂ.ಸಿ.ಮೇರಿ ಕೋಮ್ (48 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್'ಶಿಪ್'ನಲ್ಲಿ 5ನೇ ಚಿನ್ನದ ಪದಕ ಗೆಲ್ಲಲು ಇನ್ನೊಂದೆ ಹೆಜ್ಜೆ ಬಾಕಿಯಿದೆ. ಇದೇವೇಳೆ ಸೋನಿಯಾ ಲಾಥರ್ ಕೂಡಾ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್‌'ನಲ್ಲಿ ಜಪಾನ್ ಸುಬಾಸಾ ಕೌಮುರಾ ವಿರುದ್ಧ 5-0 ಅಂತರದಿಂದ ಜಯ ಗಳಿಸುವ ಮೂಲಕ ಫೈನಲ್‌'ಗೇರಿದ ಮೇರಿ, 48 ಕೆಜಿ ವಿಭಾಗದಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಫೈನಲ್‌'ನಲ್ಲಿ ಮೇರಿಗೆ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ವಿರುದ್ಧ ಸೆಣಸಲಿದ್ದಾರೆ.

ಹಾಗೆಯೇ 57 ಕೆಜಿ ವಿಭಾಗದ ಸೆಮೀಸ್‌'ನಲ್ಲಿ ಉಜ್ಬೇಕಿಸ್ತಾನದ ಯೋಡ್ಗೊರೊಯ್ ಮಿರ್ಜಾವಾರನ್ನು ಮಣಿಸಿದ ಸೋನಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಇನ್ನುಳಿದ ಐವರು ಬಾಕ್ಸರ್‌'ಗಳು ಸೆಮಿಫೈನಲ್‌'ನಲ್ಲಿ ಎಡವಿ ಕಂಚಿಗೆ ತೃಪ್ತರಾಗಿದ್ದಾರೆ. ಸರಿತಾ ದೇವಿ, ಸೀಮಾ ಪೂನಿಯಾ, ಲವ್‌'ಲಿನಾ ಬೋರ್ಗೊಹೇನ್, ಪ್ರಿಯಾಂಕ ಚೌಧರಿ ನಾಲ್ಕರ ಘಟ್ಟದಲ್ಲಿ  ಸೋಲುಂಡು ಕಂಚಿಗೆ ಕೊರಳೊಡ್ಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?