ಒಂದೇ ಪಂದ್ಯದಲ್ಲಿ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸ್ಟಾರ್ಕ್.!

By Suvarna Web DeskFirst Published Nov 7, 2017, 8:09 PM IST
Highlights

ಆಸ್ಟ್ರೇಲಿಯಾದ ಶೆಫೆಲ್ಡ್ ಶೀಲ್ಡ್ ಟೂರ್ನಿಯ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಯಾವೊಬ್ಬ ಆಟಗಾರನೂ ಇಲ್ಲಿಯವರೆಗೆ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿಲ್ಲ.

ಸಿಡ್ನಿ(ನ.07) ಮಿಚೆಲ್ ಸ್ಟಾರ್ಕ್ ಕ್ರಿಕೆಟ್ ಇತಿಹಾಸದಲ್ಲೇ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ.

ಶೆಫೆಲ್ಡ್ ಶೀಲ್ಡ್ ಟೂರ್ನಿಯಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಮಿಂಚಿನ ದಾಳಿ ಸಂಘಟಿಸಿದ ನ್ಯೂ ಸೌಥ್ ವೇಲ್ಸ್ ತಂಡದ ಮಿಚೆಲ್ ಸ್ಟಾರ್ಕ್ ಮೊದಲ ಇನಿಂಗ್ಸ್'ನಲ್ಲಿ ಒಮ್ಮೆ ಹಾಗೂ ಎರಡನೇ ಇನಿಂಗ್ಸ್'ನಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ಸ್ಟಾರ್ಕ್ ವಿನೂತನ ದಾಖಲೆ ನಿರ್ಮಿಸಿದರು. ಸ್ಟಾರ್ಕ್ ಮಾರಕ ದಾಳಿಯ ನೆರವಿನಿಂದ ನ್ಯೂ ಸೌಥ್ ವೇಲ್ಸ್ 171 ರನ್'ಗಳ ಜಯಭೇರಿ ಬಾರಿಸಿತು.

ಆಸ್ಟ್ರೇಲಿಯಾದ ಶೆಫೆಲ್ಡ್ ಶೀಲ್ಡ್ ಟೂರ್ನಿಯ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಯಾವೊಬ್ಬ ಆಟಗಾರನೂ ಇಲ್ಲಿಯವರೆಗೆ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿಲ್ಲ.

ಭಾರತದ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 1963ರಲ್ಲಿ ಸರ್ವೀಸಸ್ ಹಾಗೂ ಉತ್ತರ ಪಂಜಾಬ್ ನಡುವಿನ ಪಂದ್ಯದಲ್ಲಿ ಜೋಗಿಂದರ್ ರಾವ್ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.  

click me!