
ಬೆಂಗಳೂರು[ಮಾ.05]: 2018ರ ಐಪಿಎಲ್ ಟೂರ್ನಿಯಲ್ಲಿ ಆರ್'ಸಿಬಿ ತಂಡದಲ್ಲಿ ಆಡುವ ಕನಸಿತ್ತು. ಆದರೆ ಹರಾಜು ಪ್ರಕ್ರಿಯೆ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದ್ದು ಖುಷಿ ನೀಡಿದೆ ಎಂದು ಮಯಾಂಕ್ ಅಗರ್'ವಾಲ್ ಹೇಳಿದ್ದಾರೆ.
ಪಂಜಾಬ್ ತಂಡದಲ್ಲಿರುವ ತ್ರಿವಳಿ ಕರ್ನಾಟಕ ಆಟಗಾರರಾದ ಕರುಣ್ ನಾಯರ್, ರಾಹುಲ್, ಮಯಾಂಕ್ ಅಗರ್'ವಾಲ್ ಐಪಿಎಲ್ ಅನುಭವದ ಕುರಿತು ಶುಕ್ರವಾರ ಕಿರು ಸಂದರ್ಶನ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಯಾಂಕ್, ಮೂವರು ಪಂಜಾಬ್ ಸೇರುತ್ತೇವೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದು ಈಡೇರಿದ್ದು ಸಂತಸವಾಗಿದೆ’ ಎಂದರು.
ಇದುವರೆಗೆ ಪಂಜಾಬ್ ಪರ 8 ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್’ವಾಲ್ 116 ರನ್ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.