ಮನು ಭಾಕರ್ ವರ್ಸಸ್ ವೈಭವ್ ಸೂರ್ಯವಂಶಿ: ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?

Published : Apr 28, 2026, 08:58 AM IST
Manu bhakar and vaibhav suryavamshi

ಸಾರಾಂಶ

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅನೇಕರು ಪ್ರಶ್ನೆ ಕೇಳಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವೈಭವ್ ಸೂರ್ಯವಂಶಿ ಸಾಧನೆ ಬಗ್ಗೆ ಮನು ಭಾಕರ್ ಬಳಿ ಪ್ರಶ್ನೆ:

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಬಳಿ ಈಗಿನ ಕ್ರಿಕೆಟ್ ಸೆನ್ಸೇಷನ್ ಆಗಿರುವ ವೈಭವ್ ಸೂರ್ಯವಂಶಿ ಅವರ ಬಗ್ಗೆ ಕೇಳಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI)ದ 75 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಯುವ ಕ್ರಿಕೆಟರ್ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಅವರ ಸಾಧನೆ ಬಗ್ಗೆ ಏನನಿಸುತ್ತಿವೆ ಎಂದು ಕೇಳಲಾಗಿತ್ತು. ಇವರಿಬ್ಬರು ಭಾರತದ ಯುವ ಕ್ರೀಡಾಪಟುಗಳು ಸೂರ್ಯವಂಶಿ ಕ್ರಿಕೆಟರ್ ಆಗಿದ್ದರೆ ಮನು ಭಾಕರ್ ಶೂಟರ್‌ ಆಗಿದ್ದಾರೆ. ಆದರೆ ಇದು ಶೂಟರ್ ಮನು ಭಾಕರ್ ಅವರ ಸ್ವಂತ ಸಾಧನೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಕಾರಣವಾಯಿತು. ಆದರೆ ಮನು ಭಾಕರ್ ಮಾತ್ರ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಸಾಧನೆಗೆ ವಯಸ್ಸಿಗಿಂತ ಒಳ್ಳೆಯ ಮಾರ್ಗದರ್ಶನ ಮುಖ್ಯ ಎಂದು ಅವರು ಉತ್ತರಿಸಿದರು.

ಪ್ರಬುದ್ಧ ಉತ್ತರ ನೀಡಿದ ಒಲಿಂಪಿಕ್ ವಿಜೇತೆ ಮನು ಭಾಕರ್

ಅವರ ಮಾರ್ಗದರ್ಶಕರು ಒಳ್ಳೆಯವರಾಗಿದ್ದರೆ, ಅವನ ಸುತ್ತಲಿನ ಸಹವಾಸ ಒಳ್ಳೆಯದಾಗಿದ್ದರೆ ಮತ್ತು ಅವನ ಸುತ್ತಲಿನ ಜನರು ಒಳ್ಳೆಯವರಾಗಿದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ. ಮತ್ತು ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂದು ಅವರು ಹೇಳಿದರು . 60 ವರ್ಷ ವಯಸ್ಸಿನಲ್ಲಿಯೂ ಒಳ್ಳೆಯ ವಿಷಯಗಳು ನಡೆಯುತ್ತವೆ. ಹಾಗೆಯೇ ಆರನೇ ವರ್ಷದಲ್ಲಿಯೂ ಒಳ್ಳೆಯದು ನಡೆಯುತ್ತವೆ. ಆದ್ದರಿಂದ ಅವನ ಸುತ್ತಲಿನ ಜನರು ಹೇಗಿರುತ್ತಾರೆ. ಯಾವ ರೀತಿ ಅವನಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ ಎಂದಾದರೆ ಅವನು ಮುಂದಿನ ದೊಡ್ಡ ತಾರೆಯಾಗುತ್ತಾನೆ ಎಂದು ಖಚಿತ ಎಂದು 24 ವರ್ಷದ ಮನು ಭಾಕರ್‌ ವಿವರಿಸಿದ್ದಾರೆ. ಯುವ ಕ್ರೀಡಾಪಟುಗಳು ಗಣ್ಯ ಕ್ರೀಡಾಪಟುಗಳಾಗಿ ಬದಲಾಗಲು ಅವರಿಗೆ ಸಿಗುವ ಬೆಂಬಲ ಕಾರಣ ಎಂದು ಮನು ಹೇಳಿದರು.

ನೆಟ್ಟಿಗರಿಂದ ಅಸಮಾಧಾನ:

ಆದರೆ ಮನು ಭಾಕರ್ ಅವರಿಗೆ ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಅನೇಕರು ಇಂಟರ್‌ನೆಟ್‌ನಲ್ಲಿ ಆಕ್ಷೇಪವೆತ್ತಿದ್ದಾರೆ. ಇದು ಸ್ವತಃ ಮನು ಭಾಕರ್ ಅವರ ಸಾಧನೆಯನ್ನು ಕಡೆಗಣಿಸಿದಂತಿದೆ ಎಂದು ಹಲವರು ವಾದಿಸಿದರು.

ಜನರೇ, ಅವರು ಒಲಿಂಪಿಕ್ ಪದಕ ವಿಜೇತೆ. ವೈಭವ್ ಸೂರ್ಯವಂಶಿ ಬಗ್ಗೆ ಅವರ ಅಭಿಪ್ರಾಯವೇನು ಎಂದು ಕೇಳುವುದು ಅವರ ಸಾಧನೆಗಳು ಮತ್ತು ಅವರ ಕ್ರೀಡೆಗೆ ಮಾಡಿದ ಅನ್ಯಾಯವಾಗಿದೆ. ಕ್ರಿಕೆಟ್ ದೇಶದ ಪ್ರಮುಖ ಆಟ, ನಿಮ್ಮ ಕ್ರೀಡಾ ಸಂಪಾದಕರು ಸೂರ್ಯವಂಶಿ ಬಗ್ಗೆ ಸುದ್ದಿ ಮಾಡಲು ಬೇರೆ ಸೆಲೆಬ್ರಿಟಿ ಬಾಯಲ್ಲಿ ಅದನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಬೇಕಿದ್ದರೆ, ಮುಂದಿನ ಬಾರಿ ವೈಭವ್ ಸೂರ್ಯವಂಶಿ ಅವರ ಬಳಿ ಮನು ಭಾಕರ್ ಬಗ್ಗೆ ಕೇಳಿ ಮತ್ತು ಅದು ಹೇಗೆ ಕಾಣುತ್ತದೆ ಎಂಬುದನ್ನು ನೋಡಿ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಅನೇಕ ಸೋಶೀಯಲ್ ಮೀಡಿಯಾ ಬಳಕೆದಾರರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಅಲ್ಲದ ಕ್ರೀಡೆಗಳ ಕ್ರೀಡಾಪಟುಗಳನ್ನು ಹೆಚ್ಚಾಗಿ ಕ್ರಿಕೆಟ್ ಕೇಂದ್ರಿತ ನಿರೂಪಣೆಗಳಿಗೆ ಹೇಗೆ ಎಳೆಯಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಯಾವಾತ್ತಾದರೂ ಶೂಟರ್‌ಗಳ ಬಗ್ಗೆ ಕ್ರಿಕೆಟರ್‌ಗಳ ಬಳಿ ಕೇಳಲಾಗಿದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಿಜವಾಗಿ ನೀವು ಮನು ಭಾಕರ್ ಬಗ್ಗೆ ವೈಭವ್ ಬಳಿ ಕೇಳಬೇಕಿತ್ತು. ಆದರೆ ನೀವು ಆತನ ಬಗ್ಗೆ ಆಕೆಯ ಬಳಿ ಕೇಳಿದ್ದೀರಿ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಅಧಿಕಾರಿಗೆ ಹೂತು ಹಾಕುವುದಾಗಿ ಬೆದರಿಕೆ ಹಾಕಿದ ಸಚಿವನ ಸೋದರ: ಬಂಧನವಾದ ಕೆಲ ಗಂಟೆಗಳಲ್ಲೇ ಸಿಕ್ತು ಜಾಮೀನು

ಇತ್ತ ವೈಭವ್ ಸೂರ್ಯವಂಶಿ ಅವರು ಐಪಿಎಲ್‌ನಲ್ಲಿ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 20 ರನ್‌ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಹಲವು ಶತಕಗಳನ್ನು ಬಾರಿಸಿದ್ದು, ಅಂಡರ್ 19 ಕ್ರಿಕೆಟ್‌ನಲ್ಲೂ ಒಳ್ಳೆಯ ಸ್ಕೋರ್ ಹೊಂದಿದ್ದಾರೆ. ಹಾಗೆಯೇ ಮನು ಭಾಕರ್ ಅವರ ಬಗ್ಗೆ ಹೇಳುವುದಾದರೆ ಇವರು ಒಲಿಂಪಿಕ್ ಗೇಮ್‌ನಲ್ಲಿ 2 ಪದಕಗಳನ್ನು ಹೊಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಮತ್ತು ವಿಶ್ವಕಪ್‌ಗಳಲ್ಲಿ 23 ಪದಕಗಳು, ಹಾಗೆಯೇ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ 12 ಪದಕಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾವು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ನಿನ್ನೆ ನಡೆದ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಜೋಶ್ ಹೇಜಲ್‌ವುಡ್-ಭುವಿ ಬಿರುಗಾಳಿ ದಾಳಿಗೆ ಡೆಲ್ಲಿ ಚೆಲ್ಲಾಪಿಲ್ಲಿ! ಡೆಲ್ಲಿಗೆ ನುಗ್ಗಿ ಹೊಡೆದ ಆರ್‌ಸಿಬಿ