
ಬೆಂಗಳೂರು(ಮಾ.17): ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಪಟ್ಟಕ್ಕೇರುವ ಕನಸು ಭಗ್ನವಾಗಿದೆ. ಬಿಎಫ್'ಸಿಯನ್ನು 2-3 ಗೋಲುಗಳಿಂದ ಮಣಿಸಿದ ಚೆನ್ನೈಯಿನ್ ಎಫ್'ಸಿ ಎರಡನೇ ಬಾರಿಗೆ ಐಎಸ್ಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿತ್ತು. ಬಿಎಫ್‌ಸಿ ಪರ ನಾಯಕ ಸುನಿಲ್ ಚೆಟ್ರಿ (9ನೇ ನಿ.) ಗೋಲು ಬಾರಿಸುವ ಮೂಲಕ ಖಾತೆ ಆರಂಭಿಸಿದರು. ಇನ್ನು ಚೆನ್ನೈ ಪರ ಮೈಲ್ಸನ್ ಅಲ್ವೀಸ್ 17ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಕೆಲಹೊತ್ತಿನಲ್ಲೇ ಮೈಲ್ಸನ್ ಅಲ್ವೀಸ್ ಮತ್ತೊಂದು ಗೋಲು ಬಾರಿಸಿ ಚೆನ್ನೈಗೆ ಮುನ್ನಡೆ ಒದಗಿದರು.
ರಾಫೆಲ್ ಅಗಸ್ಟೊ(67ನೇ ನಿ.) ಬೆಂಗಳೂರು ರಕ್ಷಣಾ ಕೋಟೆ ವಂಚಿಸಿ ಗೋಲು ಬಾರಿಸುವ ಮೂಲಕ ಗೋಲಿನ ಅಂತರ 3-1ಕ್ಕೆ ಹೆಚ್ಚಿಸಿದರು. ಪಂದ್ಯದ 90ನೇ ನಿಮಿಷದಲ್ಲಿ ಬಿಎಫ್'ಸಿ ಸ್ಟಾರ್ ಆಟಗಾರ ಮಿಕು ಗೋಲು ಸಿಡಿಸಿ ಪಂದ್ಯಕ್ಕೆ ರೋಚಕತೆ ಹೆಚ್ಚಿಸಿದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.