ಕ್ರಿಕೆಟ್ ಬಳಿಕ ಇದೀಗ ರಾಜಕೀಯದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕ್ರಿಕೆಟಿಗ ಗೌತಮ್ ಗಂಭೀರ್, ನಾಮ ಪತ್ರ ಸಲ್ಲಿಸಿದ್ದಾರೆ. ಗಂಭೀರ್ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ಗಂಭೀರ್ ಎದುರಾಳಿಗಳು ಯಾರು? ಇಲ್ಲಿದೆ ವಿವರ.
ದೆಹಲಿ(ಏ.23): ಟೀಂ ಇಂಡಿಯಾ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಇದೀಗ 2019ರ ಲೋಕಸಭಾ ಚುನಾವಣೆಗೆ ಧುಮುಕಿರುವ ಗಂಭೀರ್ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ. ದೆಹಲಿ ಪೂರ್ವದಿಂದ ಗೌತಮ್ ಗಂಭೀರ್, ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಿಮ್ಗೆ ಕಾಶ್ಮೀರ ಗೊತ್ತಿಲ್ಲ, ಐಪಿಎಲ್ ಟ್ವೀಟ್ ಮಾಡಿ: ಓಮರ್ 'ಗಂಭೀರ' ರಿಪ್ಲೈ!
ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿ ಪೂರ್ವದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಗಿರಿ ಸ್ಪರ್ಧಿಸಿದ್ದರು. ಇದೀಗ ಗಂಭೀರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. 3 ಬಾರಿ MLA ಆಗಿರುವ ಕಾಂಗ್ರೆಸ್‌ನ ಅರವಿಂದ್ ಸಿಂಗ್ ಹಾಗೂ ಆಮ್ ಆದ್ಮಿ ಪಕ್ಷದ ಅತಿಶಿ ವಿರುದ್ಧ ಗಂಭೀರ್ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್..!
ದೆಹಲಿ ದಕ್ಷಿಣದಿಂದ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಾಕ್ಸರ್ ಆಗಿ ಜನರು ನನ್ನನ್ನು ಇಷ್ಟಪಟ್ಟಿದ್ದಾರೆ. ಇದೀಗ ನಾನು ಜನರ ಸೇವೆಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಜನರು ಅಭಿವೃದ್ಧಿಯನ್ನು ಬಯಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಮತಹಾಕಲಿದ್ದಾರೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.