ಮೆಸ್ಸಿ, ರೊನಾಲ್ಡೊ ಹಿಂದಿಕ್ಕಿದ ಫೆಡರರ್

By Suvarna Web DeskFirst Published Jan 12, 2017, 4:21 PM IST
Highlights

2016ರಲ್ಲಿ ಜಗತ್ತಿನ ಕ್ರೀಡಾಪಟುಗಳು ಜಾಹೀರಾತಿನಿಂದ ಗಳಿಸಿದ ಒಟ್ಟು ಆದಾಯದ ಮೇರೆಗೆ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಲಂಡನ್(ಜ.12): ವಿಶ್ವದ 30 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದು, ಧೋನಿ, ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಇನ್ನು, ಈ ಪಟ್ಟಿಯಲ್ಲಿ ಸ್ವಿಟ್ಜರ್‌'ಲೆಂಡಿನ ಸ್ಟಾರ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅಗ್ರಸ್ಥಾನದಲ್ಲಿದ್ದಾರೆ ಎಂದು ಲಂಡನ್‌'ನ ಸ್ಕೂಲ್ ಆಫ್ ಮಾರ್ಕೆಟಿಂಗ್ ನಡೆಸಿದ ಸಮೀಕ್ಷೆ ಹೇಳಿದೆ ಎಂದು ‘ಸ್ಪೋರ್ಟ್ಸ್ ಕ್ರೀಡಾ’ ವರದಿ ಮಾಡಿದೆ.

2016ರಲ್ಲಿ ಜಗತ್ತಿನ ಕ್ರೀಡಾಪಟುಗಳು ಜಾಹೀರಾತಿನಿಂದ ಗಳಿಸಿದ ಒಟ್ಟು ಆದಾಯದ ಮೇರೆಗೆ ಈ ಪಟ್ಟಿಯನ್ನು ತಯಾರಿಸಲಾಗಿದೆ. ಸರ್ಬಿಯಾದ ಟೆನಿಸಿಗ ನೊವಾಕ್ ಜೊಕೊವಿಚ್ 7, ಪೋರ್ಚುಗಲ್‌'ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 8, ಅರ್ಜೆಂಟೀನಾದ ಫುಟ್ಬಾಲಿಗ ಲಯೋನೆಲ್ ಮೆಸ್ಸಿ 11ನೇ ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಮಹಿಳಾ ಆಟಗಾರ್ತಿಯರಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ರಷ್ಯಾದ ಮರಿಯಾ ಶರಪೋವಾ ಇದ್ದು, ಈರ್ವರ ಆದಾಯ 16.4 ಮಿಲಿಯನ್ ಪೌಂಡ್‌'ಗಳಾಗಿರುವುದು ವಿಶೇಷ.

ಶ್ರೀಮಂತ ಕ್ರೀಡಾಪಟುಗಳು (ಮಿಲಿಯನ್ ಪೌಂಡ್‌ಗಳಲ್ಲಿ)

1. ರೋಜರ್ ಫೆಡರರ್ (49.2)

2. ಲೆಬ್ರಾನ್ ಜೇಮ್ಸ್ (44.3)

3. ಫಿಲ್ ಮಿಕ್ಲಿಸನ್ (41)

4. ಟೈಗರ್ ವುಡ್ಸ್ (36)

5. ಕೆವಿನ್ ಡುರಾಂಟ್ (29.5)

12. ಎಂ.ಎಸ್. ಧೋನಿ (22.1)

13. ವಿರಾಟ್ ಕೊಹ್ಲಿ (14.8)

click me!