
ವೆಲ್ಲಿಂಗ್ಟನ್(ಫೆ.06): ವಿದೇಶಿ ಪಿಚ್‌ಗಳಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್, ಅನುಭವಿ ರವಿಚಂದ್ರನ್ ಅಶ್ವಿನ್‌ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಸದ್ಯ ಟೆಸ್ಟ್‌ನಲ್ಲಿ ಕುಲ್ದೀಪ್ ದೇಶದ ನಂ.1 ಸ್ಪಿನ್ನರ್. ಹೀಗಾಗಿ ಅವರು ನಮ್ಮ ಮೊದಲ ಆಯ್ಕೆಯಾಗಿದ್ದಾರೆ ಎಂದು ಭಾರತ ತಂಡದ ಪ್ರಧಾನ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಬೌಲಿಂಗ್ ಹೇಳಿಕೊಟ್ಟು ವಿಕೆಟ್ ಎಗರಿಸಿದ ಧೋನಿ: ವಿಡಿಯೋ ವೈರಲ್..!
‘ಕುಲ್ದೀಪ್ ಈಗಾಗಲೇ ವಿದೇಶದಲ್ಲಿ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅಲ್ಲದೆ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಹೀಗಾಗಿ ವಿದೇಶಿ ಪ್ರವಾಸಕ್ಕೆ ಕುಲ್ದೀಪ್ ಮೊದಲ ಆಯ್ಕೆಯಾಗಿದ್ದಾರೆ. ಪಂದ್ಯದಲ್ಲಿ ಒಬ್ಬ ಸ್ಪಿನ್ನರ್‌ನನ್ನು ಮಾತ್ರ ಕಣಕ್ಕಿಳಿಸುವುದಾದರೆ, ಅದು ಕುಲ್ದೀಪ್ ಆಗಿರಲಿದ್ದಾರೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಬಿಯರ್ ಕುಡಿಯುತ್ತಾ ಬಸ್ ಇಳಿದ ಶಾಸ್ತ್ರಿ: ಟ್ವಿಟರಿಗರಿಂದ ಫುಲ್ ಕ್ಲಾಸ್
ಆಸ್ಪ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ ಕುಲ್ದೀಪ್ 5 ವಿಕೆಟ್ ಕಿತ್ತಿದ್ದರು. ಭಾರತ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು. ಟೀಂ ಇಂಡಿಯಾ ಗೆಲುವಿನಲ್ಲಿ ಕುಲ್ದೀಪ್ ಪ್ರಮುಖ ಪಾತ್ರವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.