ಬೆಂಗಳೂರಲ್ಲಿ ಮಹಿಳಾ ಟಿ-20 ಲೀಗ್‌; ಸ್ಟಾರ್ ಆಟಗಾರ್ತಿಯರು ಕಣಕ್ಕೆ!

Published : Aug 03, 2019, 02:49 PM ISTUpdated : Aug 03, 2019, 03:24 PM IST
ಬೆಂಗಳೂರಲ್ಲಿ ಮಹಿಳಾ ಟಿ-20 ಲೀಗ್‌; ಸ್ಟಾರ್ ಆಟಗಾರ್ತಿಯರು ಕಣಕ್ಕೆ!

ಸಾರಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ಮಹಿಳಾ ಟಿ20 ಲೀಗ್ ಆರಂಭಗೊಳ್ಳುತ್ತಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ರಾಜ್ಯದ ಸ್ಟಾರ್ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  

ಬೆಂಗಳೂರು(ಆ.03):  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸಹಯೋಗದಲ್ಲಿ ‘ಓಷನ್‌ ವೈಬ್ರಾನ್ಸ್‌’ ಎಂಬ ಖಾಸಗಿ ಸಂಸ್ಥೆ ಭಾನುವಾರದಿಂದ ಮಹಿಳಾ ಟಿ20 ಕ್ರಿಕೆಟ್‌ ಲೀಗ್‌ ಅನ್ನು ಆಯೋಜಿಸುತ್ತಿದೆ. ಲೀಗ್‌ನಲ್ಲಿ ಭಾರತ ತಂಡದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್‌, ಕರ್ನಾಟಕ ತಂಡದ ನಾಯಕಿ ರಕ್ಷಿತಾ.ಕೆ, ವೇಗಿ ಆಕಾಂಕ್ಷ ಕೊಹ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳ ಜೆರ್ಸಿ ಹಾಗೂ ಟ್ರೋಫಿ ಅನಾವರಣಗೊಳಿಸಲಾಯಿತು.

ಇದನ್ನೂ ಓದಿ: ಇಂದು ಭಾರತ-ವಿಂಡೀಸ್‌ ಮೊದಲ ಟಿ20

ಒಟ್ಟು 4 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿದ್ದು, ಆ.8ರಂದು ಫೈನಲ್‌ ನಡೆಯಲಿದೆ. ತಂಡಗಳಿಗೆ ಕಾವೇರಿ, ನರ್ಮದಾ, ಸಿಂಧು ಹಾಗೂ ಯಮುನಾ ಎಂದು ಹೆಸರಿಡಲಾಗಿದೆ. ನಗರದ ಥಣಿಸಂದ್ರ ಬಳಿಯಿರುವ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಸರಣಿ ಗೆದ್ದು ಸಂಭ್ರಮಾಚರಣೆ; ಬೈಕ್‌ನಿಂದ ಬಿದ್ದ ಲಂಕಾ ಕ್ರಿಕೆಟಿಗ!

‘ರಾಜ್ಯದ ವಿವಿಧ ಕ್ಲಬ್‌ಗಳ ಯುವ ಆಟಗಾರ್ತಿಯರಿಗೆ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಸಿಗಲಿದ್ದು, ಈ ರೀತಿಯ ಟೂರ್ನಿಗಳು ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲಿದೆ’ ಎಂದು ಕೆಎಸ್‌ಸಿಎ ಸಹಾಯಕ ಕಾರ‍್ಯದರ್ಶಿ ಸಂತೋಷ್‌ ಮೆನನ್‌ ಅಭಿಪ್ರಾಯಪಟ್ಟರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?