
ಬೆಂಗಳೂರು(ಆ. 06): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಮುಕ್ತಾಯಗೊಂಡ ಹರಾಜು ಪ್ರಕ್ರಿಯೆಯಲ್ಲಿ ಹಾಲಿ ಕೆಪಿಎಲ್ ಚಾಂಪಿಯನ್ಸ್ ಮೈಸೂರು ವಾರಿಯರ್ಸ್ ಈ ಬಾರಿಯೂ ಸ್ಟಾರ್ ಪ್ಲೇಯರ್'ಗಳನ್ನ ಬುಟ್ಟಿಗೆ ಹಾಕಿಕೊಂಡಿದೆ. ಕರುಣ್ ನಾಯರ್, ಜೆ.ಸುಚಿತ್ ಮತ್ತು ಶ್ರೇಯಸ್ ಗೋಪಾಲ್ ಅವರು ಮೈಸೂರು ತಂಡದಲ್ಲಿದ್ದಾರೆ. ಐಪಿಎಲ್'ನಲ್ಲಿ ತಮ್ಮ ವಿಶೇಷ ಬೌಲಿಂಗ್ ಶೈಲಿಯಿಂದಾಗಿ ಗಮನ ಸೆಳೆದಿರುವ ಶಿವಿಲ್ ಕೌಶಿಕ್'ರನ್ನೂ ವಾರಿಯರ್ಸ್ ತಂಡದ ಮಾಲೀಕರು ಖರೀದಿಸಿದ್ದಾರೆ. ಇವರಲ್ಲದೇ ಅರ್ಜುನ್ ಹೊಯ್ಸಳ, ಸುನೀಲ್ ರಾಜು ಮೊದಲಾದ ಪ್ರತಿಭೆಗಳು ಮೈಸೂರು ತಂಡಕ್ಕೆ ಸಿಕ್ಕಿವೆ.
ಮೈಸೂರು ವಾರಿಯರ್ಸ್ ತಂಡದ ಪಟ್ಟಿ:
ಪೂಲ್ ಎ ಆಟಗಾರರು:
1) ಸುನೀಲ್ ರಾಜು: 5 ಲಕ್ಷ
2) ಜಗದೀಶ್ ಸುಚಿತ್: 2.5 ಲಕ್ಷ
3) ವೈಶಾಖ್ ವಿಜಯ್'ಕುಮಾರ್: 2.1 ಲಕ್ಷ
4) ಶ್ರೇಯಸ್ ಗೋಪಾಲ್: 3.4 ಲಕ್ಷ
5) ಕರುಣ್ ನಾಯರ್: 4 ಲಕ್ಷ
ಇತರ ಆಟಗಾರರು:
6) ಎಸ್.ನಿಕಿತ್: 1.9 ಲಕ್ಷ
7) ಅಕ್ಷಯ್ ಎಸ್'ಎಲ್: 1.7 ಲಕ್ಷ
8) ಅವಿನಾಶ್ ಕೆಸಿ: 45 ಸಾವಿರ
9) ಶ್ರೀಜಿತ್ ಕೆಎಲ್: 20 ಸಾವಿರ
10) ಭರತ್ ಎನ್'ಪಿ: 1.2 ಲಕ್ಷ
11) ಎಸ್'ಪಿ ಮಂಜುನಾಥ್: 2.7 ಲಕ್ಷ
12) ಕುಶಾಲ್ ವಾಧ್ವಾನಿ: 20 ಸಾವಿರ
13) ಅರ್ಜುನ್ ಹೊಯ್ಸಳ: 3.2 ಲಕ್ಷ
14) ಶಿವಿಲ್ ಕೌಶಿಕ್: 30 ಸಾವಿರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.