ಕೊನೆರು ಹಂಪಿ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್! ಚೆಸ್ ತಾರೆಯನ್ನು ಕೊಂಡಾಡಿದ ಮೋದಿ

Published : Dec 30, 2024, 08:36 AM ISTUpdated : Dec 30, 2024, 10:15 AM IST
ಕೊನೆರು ಹಂಪಿ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್! ಚೆಸ್ ತಾರೆಯನ್ನು ಕೊಂಡಾಡಿದ ಮೋದಿ

ಸಾರಾಂಶ

ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆದರು. ಇಂಡೋನೇಷ್ಯಾದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ೮.೫ ಅಂಕ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. 2019ರಲ್ಲೂ ಈ ಪ್ರಶಸ್ತಿ ಗೆದ್ದಿದ್ದ ಹಂಪಿ, ಎರಡು ಬಾರಿ ಈ ಪ್ರಶಸ್ತಿ ಗೆದ್ದ ಎರಡನೇ ಮಹಿಳಾ ಚೆಸ್ ಆಟಗಾರ್ತಿ ಎನಿಸಿಕೊಂಡರು. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ನ್ಯೂಯಾರ್ಕ್: ಭಾರತದ ಗ್ರಾಂಡ್‌ಮಾಸ್ಟರ್‌ ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ ವಿಶ್ವದ 2ನೇ ಚೆಸ್ ತಾರೆ ಎನಿಸಿಕೊಂಡಿದ್ದಾರೆ.

37 ವರ್ಷದ ಕೊನೆರು ಹಂಪಿ ಭಾನುವಾರ ಇಂಡೋನೇಷ್ಯಾದ ಸುಕಂದರ್ ವಿರುದ್ಧ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡರು. ಈ ಮೊದಲು ಅವರು 2019ರಲ್ಲೂ ಪ್ರಶಸ್ತಿ ಗೆದ್ದಿದ್ದರು. ಕೊನೆರು ಹೊರತಾಗಿ ಚೀನಾದ ಜು ವೆನ್‌ಜುನ್ ಮಾತ್ರ 1ಕ್ಕಿಂತ ಹೆಚ್ಚು ಬಾರಿ ಚಾಂಪಿಯನ್ ಆಗಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ಲಗ್ಗೆ!

ಆರಂಭಿಕ ಸುತ್ತಿನಲ್ಲಿ ಸೋತಿದ್ದ ಕೊನೆರು ಒಟ್ಟು 11 ಸುತ್ತಿನ ಪಂದ್ಯಗಳ ಬಳಿಕ 8.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಭಾರತದ ಹರಿಕಾ ದ್ರೋಣವಲ್ಲಿ ಸೇರಿದಂತೆ ಒಟ್ಟು ಮಂದಿ ತಲಾ 8 ಅಂಕದೊಂದಿಗೆ ಜಂಟಿ 2ನೇ ಸ್ಥಾನ ಹಂಚಿಕೊಂಡರು.

ಕೋಟ್ಯಂತರ ಜನರಿಗೆ ಸ್ಫೂರ್ತಿ: ಮೋದಿ

ಈ ಗೆಲುವು ಐತಿಹಾಸಿಕ. ಅವರ ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿ, ಚೆಸ್ ನಲ್ಲಿ ಇದು ಭಾರತದ ಸಮಯ. ವಿಶ್ವ ಚಾಂಪಿಯನ್ ಗುಕೇಶ್ ನಮ್ಮಲ್ಲಿದ್ದಾರೆ. ಈಗ ರ್‍ಯಾಪಿಡ್‌ ಇವೆಂಟ್‌ನಲ್ಲಿ 2ನೇ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್‌ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ.- ನರೇಂದ್ರ ಮೋದಿ 

ದಕ್ಷಿಣ ಭಾರತ ಕುಸ್ತಿ: ರಾಜ್ಯಕ್ಕೆ 49 ಬಂಗಾರ, 10 ಬೆಳ್ಳಿ ಪದಕ

ಬೆಂಗಳೂರು: ತಮಿಳುನಾಡಿನ ವೆಟ್ಟೂರಿನಲ್ಲಿ ಶನಿವಾರ, ಭಾನುವಾರ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬರೋಬ್ಬರಿ 60 ಪದಕ ಗೆದ್ದಿದೆ. ಅಂಡರ್‌-15 ವಿಭಾಗದಲ್ಲಿ 27 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು, ಹಿರಿಯರ ವಿಭಾಗದಲ್ಲಿ 22 ಚಿನ್ನ ಹಾಗೂ 8 ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಅಂಡರ್-15 ವಿಭಾಗದ ಫ್ರೀಸ್ಟೈಲ್‌ನಲ್ಲಿ 10 ಚಿನ್ನ, ಗ್ರೀಕೋ-ರೋಮನ್ ವಿಭಾಗದಲ್ಲಿ 9 ಚಿನ್ನ, 1 ಬೆಳ್ಳಿ, ಮಹಿಳಾ ವಿಭಾಗದಲ್ಲಿ 8 ಚಿನ್ನ 8, 1 ಬೆಳ್ಳಿ, 1 ಕಂಚು ಲಭಿಸಿತು.

ಸುನಿಲ್ ಗವಾಸ್ಕರ್ ಪಾದಕ್ಕೆರಗಿದ ಸೆಂಚುರಿ ಸ್ಟಾರ್ ನಿತೀಶ್ ರೆಡ್ಡಿ ತಂದೆ, ಭಾವುಕ ಕ್ಷಣದ ವಿಡಿಯೋ!

ಹಿರಿಯ ವಿಭಾಗದ ಫ್ರೀಸ್ಟೈಲ್‌ನಲ್ಲಿ 8 ಚಿನ್ನ, 2 ಬೆಳ್ಳಿ, ಗ್ರೀಕೋ-ರೋಮನ್‌ನಲ್ಲಿ 9 ಚಿನ್ನ, 1 ಬೆಳ್ಳಿ, ಮಹಿಳಾ ವಿಭಾಗದಲ್ಲಿ 5 ಚಿನ್ನ, 5 ಬೆಳ್ಳಿ ಪದಕಗಳನ್ನು ಕರ್ನಾಟಕ ಜಯಿಸಿತು. ಒಟ್ಟಾರೆ ಕರ್ನಾಟಕ ಎಲ್ಲಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಸಾಧಕ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಅಭಿನಂದನೆ ಸಲ್ಲಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Asian Games Final: ವೈಭವ್ ವಿಕೆಟ್ ಪತನದ ಬಳಿಕ ಪಾಕ್‌ ಕಿರಿಕ್; ಮೈದಾನದಲ್ಲೇ ಪ್ರತ್ಯುತ್ತರ ನೀಡಿದ ಭಾರತ!
ಐಪಿಎಲ್‌ನಲ್ಲಿ ಕ್ರಿಸ್‌ ಗೇಲ್‌ ಬಾರಿಸಿದ್ದ 175 ರನ್‌ಗಳ ಗರಿಷ್ಠ ಟಿ20 ರನ್‌ ವಿಶ್ವ ದಾಖಲೆ ಮುರಿದ 20 ವರ್ಷದ ಪ್ರಿಟೋರಿಯಸ್‌