ಹರ್ಯಾಣಕ್ಕೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ!

Published : Dec 30, 2024, 07:37 AM IST
ಹರ್ಯಾಣಕ್ಕೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ!

ಸಾರಾಂಶ

ಪುಣೆಯಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಫೈನಲ್‌ನಲ್ಲಿ ಹರ್ಯಾಣ ಸ್ಟೀಲರ್ಸ್‌ 32-23 ಅಂಕಗಳಿಂದ ಪಾಟ್ನಾ ಪೈರೇಟ್ಸ್‌ಅನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಜಯಿಸಿತು. ಶಿವಂ, ಶಾದ್ಲೂ, ವಿನಯ್‌ ಹರ್ಯಾಣದ ಗೆಲುವಿನ ರೂವಾರಿಗಳಾದರು. ಪಾಟ್ನಾಗೆ ನಾಲ್ಕನೇ ಪ್ರಶಸ್ತಿಯ ಕನಸು ಭಗ್ನವಾಯಿತು. ಹರ್ಯಾಣ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ಪುಣೆ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರ್ಯಾಣ ಸ್ಟೀಲರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಪಾಟ್ನಾ ಪೈರೇಟ್ಸ್‌ ವಿರುದ್ಧ ಫೈನಲ್‌ನಲ್ಲಿ ಹರ್ಯಾಣ 32-23 ಅಂಕಗಳಿಂದ ಗೆದ್ದು, ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡಿತು. 4ನೇ ಬಾರಿ ಟ್ರೋಫಿ ಗೆಲ್ಲುವ ಪಾಟ್ನಾ ಪೈರೇಟ್ಸ್‌ ಕನಸು ಭಗ್ನಗೊಂಡಿತು. ಕಳೆದ ಬಾರಿ ಫೈನಲ್‌ನಲ್ಲಿ ಸೋತಿದ್ದ ಹರ್ಯಾಣ ಈ ಬಾರಿ ಆ ತಪ್ಪು ಮಾಡಲಿಲ್ಲ.

ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಹರ್ಯಾಣ, ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಆರಂಭದಲ್ಲಿ ಇತ್ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂದರೂ, ಬಳಿಕ ಹರ್ಯಾಣ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ನಾಲ್ವರು ಕ್ರಿಕೆಟರ್ಸ್‌! ಈ ಭಾರತೀಯನಿಗೆ ಸಿಗುತ್ತಾ ಅವಾರ್ಡ್?

ಮೊದಲಾರ್ಧದಲ್ಲಿ 15-12 ಅಂಕಗಳಿಂದ ಮುನ್ನಡೆಯಲ್ಲಿದ್ದ ಹರ್ಯಾಣ, ಕೊನೆಯಲ್ಲಿ ಮತ್ತಷ್ಟು ಅಂಕ ಗಳಿಸಿತು. 2ನೇ ಅವಧಿಯಲ್ಲಿ ಆಲೌಟ್‌ ಜೊತೆ 17 ಅಂಕ ದೋಚಿದ ಹರ್ಯಾಣ ಅರ್ಹವಾಗಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಹರ್ಯಾಣ ಪರ ಶಿವಂ 9, ಮೊಹಮದ್‌ರೆಜಾ ಶಾದ್ಲೂ 7, ವಿನಯ್‌ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3 ಬಾರಿ ಚಾಂಪಿಯನ್‌ ಪಾಟ್ನಾ ಪರ ಗುರುದೀಪ್‌ 6, ದೇವಾಂಕ್‌ 5 ಅಂಕ ಗಳಿಸಿದರು.

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ

02ನೇ ಬಾರಿ: ಪಾಟ್ನಾ ಪ್ರೊ ಕಬಡ್ಡಿ ಫೈನಲ್‌ನಲ್ಲಿ 2ನೇ ಬಾರಿ ಸೋಲನುಭವಿಸಿತು. 2022ರ ಫೈನಲ್‌ನಲ್ಲೂ ತಂಡ ಸೋತಿತ್ತು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!