ಕೊಹ್ಲಿ ವಿಶ್ವದ 89ನೇ ಶ್ರೀಮಂತ ಕ್ರೀಡಾಪಟು! ನಂ. 1 ಯಾರು ಗೊತ್ತಾ?

Published : Jun 09, 2017, 09:41 AM ISTUpdated : Apr 11, 2018, 01:02 PM IST
ಕೊಹ್ಲಿ ವಿಶ್ವದ 89ನೇ ಶ್ರೀಮಂತ ಕ್ರೀಡಾಪಟು! ನಂ. 1 ಯಾರು ಗೊತ್ತಾ?

ಸಾರಾಂಶ

ಫೋರ್ಬ್ಸ್ ನಿಯತಕಾಲಿಕೆ 2017ನೇ ಸಾಲಿನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಪ್ರಕಟ ಮಾಡಿದ್ದು, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 89ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಹಾಗೂ ಭಾರತೀಯ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಫೋರ್ಚುಗಲ್‌ನ ಕ್ರಿಸ್ಟಿ​ಯಾನೊ ರೊನಾಲ್ಡೊ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 

ನ್ಯೂಯಾರ್ಕ್ (ಜೂ.09): ಫೋರ್ಬ್ಸ್ ನಿಯತಕಾಲಿಕೆ 2017ನೇ ಸಾಲಿನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಪ್ರಕಟ ಮಾಡಿದ್ದು, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 89ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಹಾಗೂ ಭಾರತೀಯ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಫೋರ್ಚುಗಲ್‌ನ ಕ್ರಿಸ್ಟಿ​ಯಾನೊ ರೊನಾಲ್ಡೊ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 

28 ವರ್ಷದ ವಿರಾಟ್‌ . 141.5 ಕೋಟಿ ಸಂಭಾ​­ವನೆ ಪಡೆದಿದ್ದು, ಇದರಲ್ಲಿ . 122 ಕೋಟಿ ವಿವಿಧ ಒಪ್ಪಂದಗಳಿಂದ ಲಭ್ಯವಾಗಿದೆ ಎಂದು ಫೋಬ್ಸ್‌ರ್‍ ಬಹಿರಂಗಗೊಳಿಸಿದೆ. ಇದೇ ವೇಳೆ ಕೊಹ್ಲಿ ಅವರನ್ನು ಭಾರತೀಯ ಕ್ರಿಕೆಟ್‌ ಪ್ರಮುಖ ವ್ಯಕ್ತಿ ಎಂದು ಬಣ್ಣಿಸಿರುವ ಫೋಬ್ಸ್‌ರ್‍, ಭಾರತ ಕ್ರೀಡಾ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸಚಿನ್‌ ತೆಂಡುಲ್ಕರ್‌ ಜತೆ ಹೋಲಿಕೆ ಮಾಡಿದೆ. 

ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕ್ರಿಸ್ಟಿಯಾನೊ ರೋನಾಲ್ಡೊ ಆದಾಯ . 597 ಕೋಟಿಗೂ ಅಧಿಕ ಎಂದು ಮಾಹಿತಿ ನೀಡಿದೆ. ಇನ್ನುಳಿದಂತೆ ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಲೆಬ್ರಾನ್‌ ಜೇಮ್ಸ್‌ 2, ಅರ್ಜೆಂಟಿನಾದ ಫುಟ್ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ 3ನೇ ಸ್ಥಾನ ಪಡೆದಿದ್ದಾರೆ. ಇವರಿಬ್ಬರ ಆದಾಯ . 500 ಕೋಟಿ ದಾಟಿದೆ. ರೋಜರ್‌ ಫೆಡರರ್‌ 4, ನೋವಾಕ್‌ ಜೋಕೋವಿಚ್‌ 16, ರಫೆಲ್‌ ನಡಾಲ್‌ 33 ಹಾಗೂ ಸೆರೆನಾ ವಿಲಿಯಮ್ಸ್‌ 51ನೇ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ 21 ದೇಶದ ಅಗ್ರ 100 ಕ್ರೀಡಾಪಟುಗಳಿರುವ ಪಟ್ಟಿಯಲ್ಲಿ 63 ಆಟಗಾರರು ಅಮೆರಿಕದವರೇ ಆಗಿದ್ದಾರೆ.

ಬಿಸಿಸಿಐ ವೇತನ: ಕೊಹ್ಲಿ ಹಿಂದಿಕ್ಕಿದ ಧವನ್‌

ತೆರಿಗೆ ವಿನಾಯಿತಿ ಲಾಭ ಪಡೆದ ಎಡಗೈ ದಾಂಡಿಗ ಶಿಖರ್‌ ಧವನ್‌, ಬಿಸಿಸಿಐ ನೀಡುವ ಸಂಭಾವನೆ­ಯಲ್ಲಿ ವಿರಾಟ್‌ ಕೊಹ್ಲಿಗಿಂತ ಹೆಚ್ಚು ಹಣ ಪಡೆದಿದ್ದಾರೆ. ಬಿಸಿಸಿಐ ಪ್ರಕಟಿಸಿರುವ ನೂತನ ಪ್ರಕಟಣೆಯ ಪ್ರಕಾರ, ಧವನ್‌ . 87.76 ಲಕ್ಷ ಪಡೆದಿದ್ದರೆ, ವಿರಾಟ್‌ . 83.07 ಲಕ್ಷ ವೇತನ ಗಳಿಸಿದ್ದಾರೆ. ಇನ್ನುಳಿದಂತೆ ಅಜಿಂಕ್ಯಾ ರೆಹಾನೆ . 81.06 ಲಕ್ಷ, ರವಿಚಂದ್ರನ್‌ ಅಶ್ವಿನ್‌ ಹಾಗೂ ರೋಹಿತ್‌ ಶರ್ಮಾ ತಲಾ . 73.02 ವೇತನ ಪಡೆದಿದ್ದಾರೆ. ಇನ್ನು . 32.15 ಲಕ್ಷ ಗಳಿಸಿರುವ ವರುಣ್‌ ಆರೋನ್‌ ಕಡಿಮೆ ವೇತನ ಪಡೆದಿರುವ ಆಟಗಾರ ಎಂದು ತಿಳಿದು ಬಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್