'ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರವಾದ ಮುರುಳಿ

By Suvarna Web Desk  |  First Published Jun 8, 2017, 10:11 PM IST

ಈ ಮೂಲಕ ಐಸಿಸಿಯ ಈ ಪ್ರತಿಷ್ಠಿತ ಗೌರವ ಪಡೆದ ಶ್ರೀಲಂಕಾದ ಮೊದಲ ಹಾಗೂ ಒಟ್ಟಾರೆ 83ನೇ ಆಟಗಾರ ಎನ್ನುವ ಖ್ಯಾತಿ 'ದೂಸ್ರಾ' ಸ್ಪೆಷಲಿಸ್ಟ್ ಪಾತ್ರವಾದರು.


ಲಂಡನ್(ಜೂ.08): ಶ್ರೀಲಂಕಾ ಮಾಜಿ ಕ್ರಿಕೆಟಿಗ, ಮಾಂತ್ರಿಕ ಸ್ಪಿನ್ನರ್ ಮುತ್ತಯ್ಯಾ ಮುರುಳೀಧರನ್ ಅವರಿಗೆ ಅಂತರಾಷ್ಟ್ರಿಯ ಕ್ರಿಕೆಟ್ ಸಮಿತಿಯು 'ಹಾಲ್ ಆಫ್ ಫೇಮ್' ನೀಡಿ ಗೌರವಿಸಿತು.

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಲಂಕಾ ಕ್ರಿಕೆಟ್ ದಿಗ್ಗಜನಿಗೆ 'ಹಾಲ್ ಆಫ್ ಫೇಮ್' ಕ್ಯಾಪ್ ನೀಡಿ ಗೌರವಿಸಿತು. ಈ ಮೂಲಕ ಐಸಿಸಿಯ ಈ ಪ್ರತಿಷ್ಠಿತ ಗೌರವ ಪಡೆದ ಶ್ರೀಲಂಕಾದ ಮೊದಲ ಹಾಗೂ ಒಟ್ಟಾರೆ 83ನೇ ಆಟಗಾರ ಎನ್ನುವ ಖ್ಯಾತಿ 'ದೂಸ್ರಾ' ಸ್ಪೆಷಲಿಸ್ಟ್ ಪಾತ್ರವಾದರು.

Latest Videos

undefined

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಟ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ನಿರ್ಮಿಸಿರುವ ಮುರುಳಿ, 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಹಾಗೂ 350 ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಕ್ಯಾರೆನ್ ರೊಲ್ಟಾನ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆರ್ಥರ್ ಮೋರಿಸ್ ಹಾಗೂ ಇಂಗ್ಲೆಂಡ್‌'ನ ಜಾರ್ಜ್ ಲೊಮನ್ ಅವರನ್ನು ಪಟ್ಟಿಗೆ ಸೇರ್ಪಡೆಯಾದರು.

ಹೀಗಿತ್ತು ಮುರುಳಿ ಹಾಲ್ ಆಫ್ ಫೇಮ್ ಗೌರವ ಸ್ವೀಕರಿಸಿದ ಕ್ಷಣ:

Watch the moment that Muttiah Muralitharan​ was inducted into the ICC Hall of Fame.

Congratulations Murali! 👏🇱🇰 pic.twitter.com/cFJrolaW98

— ICC (@ICC) 8 June 2017
click me!