
ಒಲ್ಡ್ ಟ್ರಾಫೋರ್ಡ್(ಜು.02): ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಹಲವು ಬಾಲಿವುಡ್ ನಟಿ ಹಾಗೂ ಮಾಡೆಲ್‌ಗಳ ಜೊತೆ ಕೇಳಿ ಬಂದಿತ್ತು. ಪ್ರತಿ ಬಾರಿ ಕರ್ನಾಟಕ ಕ್ರಿಕೆಟಿಗ ರಾಹುಲ್ ಸ್ಪಷ್ಟಣೆ ನೀಡಿದ್ದಾರೆ. ಇದೀಗ ಪಂಜಾಬಿ ನಟಿ ಸೋನಮ್ ಬಾಜ್ವ ಜೊತೆಗಿನ ರಿಲೇಷನ್‌ಶಿಪ್ ಕುರಿತು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ನಟಿ ಸೋನಮ್ ಬಾಜ್ವ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಸೋನಮ್ ಬಾಜ್ವ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ರಾಹುಲ್ ಪ್ರತಿಕ್ರಿಯಿಸೋ ಮೂಲಕ ಇವರ ನಡುವಿನ ಡೇಟಿಂಗ್ ಮತ್ತಷ್ಟು ಬಲಗೊಂಡಿತ್ತು.
ಸೋನಮ್ ಜೊತೆಗಿನ ಡೇಟಿಂಗ್ ಕುರಿತು ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರೊಂದಿಗಾದರೂ ಡೇಟಿಂಗ್ ಅಥವಾ ಯಾವುದೇ ಸಂಬಂಧ ಹೊಂದುವುದಾದರೂ ಮೊದಲೇ ತಿಳಿಸುತ್ತೇನೆ ಎಂದಿದ್ದಾರೆ.
ಇದನ್ನು ಓದಿ: ನಟಿ ಸೋನಮ್ ಬಾಜ್ವ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ನಿಜವೇ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.