ರಾಹುಲ್ ದ್ರಾವಿಡ್‌ಗೆ ಐಸಿಸಿಸಿ ಹಾಲ್ ಆಫ್ ಫೇಮ್ ಗೌರವ

First Published Jul 2, 2018, 12:46 PM IST
Highlights

ವಿಶ್ವಕ್ರಿಕೆಟ್‌ನಲ್ಲಿ 'ದಿ ವಾಲ್' ಎಂದೇ ಹೆಸರುವಾಸಿಯಾಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್‌ಗೆ ಐಸಿಸಿ ಅತ್ಯುನ್ನತ ಗೌರವ ಘೋಷಿಸಿದೆ. ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಭಾರತೀಯ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

ವೆಲ್ಲಿಂಗ್ಟನ್(ಜು.02): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅತ್ಯುನ್ನತ ಹಾಲ್ ಆಫ್ ಫೇಮ್ ಗೌರವಕ್ಕೆ ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನ ಆಯ್ಕೆ ಮಾಡಲಾಗಿದೆ. ಈ ಮೂಲಕ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗುತ್ತಿರುವ 5ನೇ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ.

ರಾಹುಲ್ ದ್ರಾವಿಡ್ ಜೊತೆಗೆ ಆಸ್ಟ್ರೇಲಿಯಾ ಕ್ರಿಕೆಟಿಗ ರಿಕಿ ಪಾಂಟಿಂಗ್, ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕ್ಲೇರ್ ಟೇಲರ್ ಅವರನ್ನ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 

ಈ ಖ್ಯಾತಿಗೆ ಪಾತ್ರರಾಗುತ್ತಿರುವ ಭಾರತದ 5 ನೇ ಕ್ರಿಕೆಟಿಗ ದ್ರಾವಿಡ್ ಆಗಿದ್ದರೆ, ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ 25 ನೇ ಕ್ರಿಕೆಟಿಗರಾಗಿದ್ದು, ಕ್ಲೇರ್ ಟೇಲರ್ ಇಂಗ್ಲೆಂಡ್ ನ 7 ನೇ ಆಟಗಾರರಾಗಿದ್ದು ಮಹಿಳಾ ವಿಭಾಗದ ಮೂರನೇ ಆಟಗಾರರಾಗಿದ್ದಾರೆ. 2009 ರಲ್ಲಿ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, 2015 ರಲ್ಲಿ ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.
 

click me!