ನಿದಾಸ್ ಟ್ರೋಫಿ ಫೈನಲ್'ನಲ್ಲಿ ರಾಹುಲ್,ಕಾರ್ತಿಕ್ ಹಾಗೂ ವಾಷಿಂಗ್ಟನ್ ನಿರ್ಮಿಸಿದ ಅಪರೂಪದ ದಾಖಲೆಗಳಿವು

By Suvarna Web DeskFirst Published Mar 19, 2018, 4:12 PM IST
Highlights

ನಿದಾಸ್ ಟ್ರೋಫಿ ಫೈನಲ್ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ನಿಮ್ಮ ಮುಂದೆ..

ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸ್ಮರಣೀಯ ಜಯಸಾಧಿಸುವುದರೊಂದಿಗೆ ನಿದಾಸ್ ಟ್ರೋಫಿಯನ್ನು ಎತ್ತಿಹಿಡಿಯಿತು. ಟೀಂ ಇಂಡಿಯಾ ಮಣಿಸಿ ಕಪ್ ಎತ್ತಿಹಿಡಿಯುವ ಬಾಂಗ್ಲಾದೇಶದ ಕನಸು ಮತ್ತೆ ಭಗ್ನವಾಯಿತು.

ನಿದಾಸ್ ಟ್ರೋಫಿ ಫೈನಲ್ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ನಿಮ್ಮ ಮುಂದೆ..

1. ನಿದಾಸ್ ಟ್ರೋಫಿ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಟಿ20 ಸರಣಿ ಗೆದ್ದ ಮೊದಲ ತಂಡ ಎನ್ನುವ ಗೌರವಕ್ಕೆ ಪಾತ್ರವಾಯಿತು.

2. ಟಿ20 ಕ್ರಿಕೆಟ್'ನಲ್ಲಿ 7 ಸಾವಿರ ರನ್ ಪೂರೈಸಿದ ಮೂರನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾದರು.

3. ಮೊಹಮ್ಮದುಲ್ಲಾ ಟಿ20 ಕ್ರಿಕೆಟ್'ನಲ್ಲಿ 8ನೇ ಬಾರಿಗೆ ರನೌಟ್ ಆಗುವುದರೊಂದಿಗೆ ಕೇನ್ ವಿಲಿಯಮ್ಸನ್ ಹಾಗೂ ಶಮಿವುಲ್ಲಾ ಸೆನ್ವಾರಿ ಅವರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

4. ಶ್ರೀಲಂಕಾ ನೆಲದಲ್ಲಿ ಟಿ20 ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ (8 ವಿಕೆಟ್) 20 ವರ್ಷ ತುಂಬುವುದರೊಳಗೆ ಅತಿಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎನಿಸಿಕೊಂಡರು. ಈ ಮೊದಲು ಈ ದಾಖಲೆ ಅಕಿಲಾ ಧನಂಜಯ ಅವರ ಹೆಸರಿನಲ್ಲಿತ್ತು.

5. ಕೆ.ಎಲ್ ರಾಹುಲ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಕೇವಲ 13 ಇನಿಂಗ್ಸ್'ಗಳಲ್ಲಿ 500 ರನ್ ಪೂರೈಸಿದರು. ಇದು ಈಗ ಹೊಸ ದಾಖಲೆ.

6. ಈ ಗೆಲುವಿನೊಂದಿಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 61ನೇ ಜಯ ದಾಖಲಿಸುವುದರೊಂದಿಗೆ ಅತಿ ಹೆಚ್ಚು ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನ(74)ವಿದೆ.

7. ಟಿ20 ಪಂದ್ಯದ ಕೊನೆಯ ಓವರ್'ನಲ್ಲಿ 5ಕ್ಕೂ ಹೆಚ್ಚು ರನ್'ಗಳ ಅವಶ್ಯಕತೆಯಿದ್ದಾಗ ಸಿಕ್ಸ್ ಬಾರಿಸಿ ತಂಡವನ್ನು ಗೆಲ್ಲಿಸಿದ ಮೊದಲ ಬ್ಯಾಟ್ಸ್'ಮನ್ ದಿನೇಶ್ ಕಾರ್ತಿಕ್.

click me!