ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆಲುವಿನ ದಡ ಸೇರಿಸಿದರು.
ಕೊಲಂಬೊ(ಮಾ.18): ತೀವ್ರ ರೋಚಕತೆಯಿಂದ ಕೂಡಿದ್ದ ನಿದಾಸ್ ಫೈನಲ್ ಪಂದ್ಯದಲ್ಲಿ ಕೊನೆಗೂ ಜಯದ ನಗೆ ಬೀರಿದೆ. ಕೊನೆಯ ಎಸೆತದಲ್ಲಿ 5 ರನ್'ಗಳ ಅವಶ್ಯಕತೆಯಿದ್ದಾಗ ಸಿಕ್ಸರ್ ಸಿಡಿಸಿ ಟೀಂ ಇಂಡಿಯಾಗೆ ಯುಗಾದಿ ಗಿಫ್ಟ್ ನೀಡಿದರು.
ಬಾಂಗ್ಲಾದೇಶ ನೀಡಿದ್ದ 167 ರನ್ ಗುರಿ ಬೆನ್ನತ್ತಿದ್ದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ 34 ರನ್ ಕಲೆ ಹಾಕಿತು. ರೋಹಿತ್ ಶರ್ಮಾ 56 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಬಾಂಗ್ಲಾದೇಶ 156 ರನ್ ಗುರಿ ನೀಡಿತ್ತು.