ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಯಾರು..?

By Web DeskFirst Published Dec 20, 2018, 1:14 PM IST
Highlights

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಇಲ್ಲವೇ ಇನ್ನಿತರ ರಾಷ್ಟ್ರವನ್ನು ಪ್ರತಿನಿಧಿಸಿರಬೇಕು. 1 ವರ್ಷ ಅಂತರಾಷ್ಟ್ರೀಯ ತಂಡ, 2 ಋತುವಿನಲ್ಲಿ ಟಿ20 ಫ್ರಾಂಚೈಸಿಯ ಕೋಚ್ ಆಗಿರಬೇಕು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಎನ್‌ಸಿಎ ಹಂತದ 3 ಕೋಚಿಂಗ್ ಸರ್ಟಿಫಿಕೇಟ್ ಅಥವಾ ಇನ್ನಿತರೆ ಸೂಕ್ತ ಅರ್ಹತೆ ಹೊಂದಿರಬೇಕು ಎಂದು ಬಿಸಿಸಿಐ ಮಾನದಂಡವನ್ನು ವಿಧಿಸಿತ್ತು.

ಮುಂಬೈ[ಡಿ.20]: ಭಾರತ ಮಹಿಳಾ ತಂಡದ ಪ್ರಧಾನ ಕೋಚ್ ಹುದ್ದೆಗೆ ಇಂದು ಸಂದರ್ಶನ ನಡೆಯಲಿದೆ. ಕೋಚ್ ಹುದ್ದೆಗೆ 28 ಅರ್ಜಿಗಳು ಬಂದಿದ್ದವು. ಇದರಲ್ಲಿ ಗ್ಯಾರಿ ಕರ್ಸ್ಟನ್, ಹರ್ಷಲ್ ಗಿಬ್ಸ್ ಮತ್ತು ರಮೇಶ್ ಪೊವಾರ್‌ರನ್ನು ಮಾತ್ರ ಅಂತಿಮ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ತಂಡವೊಂದರ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಅಂತಿಮ ಸಂದರ್ಶನಕ್ಕೆ ಮೂವರನ್ನು ಆಯ್ಕೆ ಮಾಡಿರುವುದು ಇದೇ ಮೊದಲಾಗಿದೆ.

ಆರ್’ಸಿಬಿಗೆ ಶಾಕ್ ಕೊಟ್ಟ ಗ್ಯಾರಿ ಕರ್ಸ್ಟನ್..!

ಭಾರತದ ಮಾಜಿ ನಾಯಕ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಸಮಿತಿ ಕೋಚ್‌ಗಳನ್ನು ಸಂದರ್ಶಿಸಲಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಇಲ್ಲವೇ ಇನ್ನಿತರ ರಾಷ್ಟ್ರವನ್ನು ಪ್ರತಿನಿಧಿಸಿರಬೇಕು. 1 ವರ್ಷ ಅಂತರಾಷ್ಟ್ರೀಯ ತಂಡ, 2 ಋತುವಿನಲ್ಲಿ ಟಿ20 ಫ್ರಾಂಚೈಸಿಯ ಕೋಚ್ ಆಗಿರಬೇಕು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಎನ್‌ಸಿಎ ಹಂತದ 3 ಕೋಚಿಂಗ್ ಸರ್ಟಿಫಿಕೇಟ್ ಅಥವಾ ಇನ್ನಿತರೆ ಸೂಕ್ತ ಅರ್ಹತೆ ಹೊಂದಿರಬೇಕು ಎಂದು ಬಿಸಿಸಿಐ ಮಾನದಂಡವನ್ನು ವಿಧಿಸಿತ್ತು.

ಕೋಚ್‌ ಪೊವಾರ್‌ ಪರ ಹರ್ಮನ್‌, ಸ್ಮೃತಿ ಬ್ಯಾಟಿಂಗ್‌

ಗ್ಯಾರಿ ಕರ್ಸ್ಟನ್ ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡದ ಕೋಚ್ ಆಗಿದ್ದರು. ಐಪಿಎಲ್ ತಂಡಗಳಿಗೂ ಕೋಚ್ ಆಗಿ ಕಾರ‌್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಗಿಬ್ಸ್ 2008ರಲ್ಲಿ ಐಪಿಎಲ್‌ನಲ್ಲಿ ಆಡಿದ್ದಾರೆ. ಇನ್ನೂ ಪೊವಾರ್, ಈ ಮೊದಲು ಭಾರತ ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕೋಚ್‌ ಪವಾರ್‌ಗೆ ಬಿಸಿಸಿಐ ಗೇಟ್‌ಪಾಸ್‌! ಹೊಸ ಅರ್ಜಿ ಆಹ್ವಾನ

ಕೋಚ್ ಆಗಿ ಪೊವಾರ್?:

ಪೊವಾರ್‌ 2ನೇ ಬಾರಿಗೆ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಕೆಲ ಆಟಗಾರ್ತಿಯರು ಮತ್ತು ಸುಪ್ರೀಂ ನೇಮಿತ ಬಿಸಿಸಿಐ ಸಿಒಎ ಸಮಿತಿಯ ಸದಸ್ಯೆ ಡಯಾನ ಎಡುಲ್ಜಿ ಕೂಡ ಪೊವಾರ್ ಕೋಚ್ ಆಗಿ ಮುಂದುವರೆಯಬೇಕು ಎಂದಿದ್ದಾರೆ. ವಿಂಡೀಸ್’ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ಹಾಗೂ ಪೊವಾರ್ ನಡುವೆ ಕಿತ್ತಾಟ ನಡೆದಿತ್ತು.

click me!