ಕೇಂದ್ರ ಕ್ರೀಡಾ ಸಚಿವಾಲಯ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಆರಂಭಿಸಿದ್ದು, ವಾಟ್ಸ್‌ಆ್ಯಪ್ ಮೂಲಕವೇ ಬಹುಮಾನ ಮೊತ್ತ ಪಡೆಯುವ ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಸೆ.23): ಪ್ರಮುಖ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳು ಶೀಘ್ರದಲ್ಲೇ ಎಸ್‌ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಮೂಲಕವೇ ಬಹುಮಾನ ಮೊತ್ತ ಗಳಿಸಬಹುದಾಗಿದೆ.
ಕಾಮನ್ವೆಲ್ತ್ನಲ್ಲಿ ಶೂಟಿಂಗ್: ಬ್ರಿಟನ್‌ಗೆ ರಿಜಿಜು ಪತ್ರ
ಕೇಂದ್ರ ಕ್ರೀಡಾ ಸಚಿವಾಲಯ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಆರಂಭಿಸಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್, ಸಾಮಾಜಿಕ ತಾಣಗಳಲ್ಲಿ ತಕ್ಷಣ ಲಭ್ಯವಿರುವ ಕಾರಣ, ಬಹುಮಾನ ಮೊತ್ತವೂ ಅಷ್ಟೇ ಬೇಗ ತಲುಪಬೇಕು ಎನ್ನುವುದು ಕ್ರೀಡಾ ಸಚಿವ ಕಿರಣ್ ರಿಜಿಜುಅವರ ಉದ್ದೇಶವಾಗಿದೆ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019: ಬೆಳ್ಳಿಗೆ ತೃಪ್ತಿಪಟ್ಟ ದೀಪಕ್
‘ಕ್ರೀಡಾಪಟುಗಳು ತಾವು ಗೆದ್ದಿರುವ ಬಗ್ಗೆ ಎಸ್‌ಎಂಎಸ್ ಇಲ್ಲವೇ ವಾಟ್ಸ್‌ಆ್ಯಪ್ ಮೂಲಕ ತಿಳಿಸಿದರೆ, ಕೇವಲ ಒಂದು ದಿನದಲ್ಲಿ ಬಹುಮಾನ ಮೊತ್ತ ಅವರ ಕೈ ಸೇರುವಂತೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ತಮ್ಮ ಸಾಧನೆಗೆ ಅರ್ಹ ಬಹುಮಾನ ಗಳಿಸಲು ಇನ್ಮುಂದೆ ಕ್ರೀಡಾಪಟುಗಳು ಕಾಯುವಂತಿರುವುದಿಲ್ಲ’ ಎಂದು ಕ್ರೀಡಾ ಕಾರ್ಯದರ್ಶಿ ಆರ್.ಎಸ್.ಜುಲಾನಿಯಾ ತಿಳಿಸಿದ್ದಾರೆ.