ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡಿತು. ಅಂತಿಮ ನಿಮಿಷದ ವರೆಗೆ ಪಂದ್ಯದ ಕುತೂಹಲ ಮನೆ ಮಾಡಿತ್ತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಜೈಪುರ(ಸೆ.22): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ. ಆತಿಥೇಯ ಜೈಪುರ ವಿರುದ್ಧ ಬೆಂಗಾಲ್ ಕೇವಲ 1 ಅಂಕಗಳ ಅಂತರದಿಂದ ರೋಚಕ ಗೆಲುವು ಸಾಧಿಸಿತು. 11 ಗೆಲುವು ಸಾಧಿಸಿದ ಬೆಂಗಾಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಇದನ್ನೂ ಓದಿ: ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!
ಪಂದ್ಯ ಆರಂಭದಿಂದ ಅಂತ್ಯದವರೆಗೂ ಉಭಯ ತಂಡ ಸಮಬಲದ ಹೋರಾಟ ನೀಡಿತು. ಒಂದು ಅಂಕ ಜೈಪುರ ಪಡೆದುಕೊಂಡರೆ, ಇತ್ತ ಬೆಂಗಾಲ್ ಸಮಬಲ ಮಾಡಿಕೊಂಡು ಮುನ್ನಡೆಯುತ್ತಿತ್ತು. ಭಾರಿ ಅಂತರದ ಮುನ್ನಡೆಗೆ ಎರಡೂ ತಂಡ ಅವಕಾಶ ನೀಡಲಿಲ್ಲ. ಮೊದಲಾರ್ಧದ ಅಂತ್ಯದಲ್ಲಿ ಜೈಪುರ 14-13 ಅಂಕ ಸಂಪಾದಿಸಿ 1 ಅಂಕಗಳ ಮುನ್ನಡೆ ಪಡೆದುಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7: ಪ್ಲೇ-ಆಫ್ ಲೆಕ್ಕಾಚಾರ- ಡೆಲ್ಲಿ ಬೆಸ್ಟ್, ಪ್ಲೇ-ಆಫ್ ರೇಸ್‌ನಲ್ಲಿ ಬುಲ್ಸ್!
ದ್ವಿತಿಯಾರ್ಧದ ಆರಂಭದಲ್ಲಿ ಜೈಪುರ ತಂಡವನ್ನು ಆಲೌಟ್ ಮಾಡಿದ ಬೆಂಗಾಲ್ ವಾರಿಯರ್ಸ್ 20-14 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. 11ನೇ ನಿಮಿಷದಲ್ಲಿ ಜೈಪುರ ಮತ್ತೆ ಆಲೌಟ್ ಆಯಿತು. ಈ ಮೂಲಕ ಬೆಂಗಾಲ್ 33-25 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಅಂತಿಮ ಹಂತದಲ್ಲಿ ಜೈಪುರ ಮಿಂಚಿನ ಆಟ ಪ್ರದರ್ಶಿಸಿತು. 20ನೇ ನಿಮಿಷದಲ್ಲಿ ಜೈಪುರ 40-41 ಅಂಕ ಪಡೆದು ಸೋಲಿಗೆ ಶರಣಾಯಿತು. 1 ಅಂಕಗಳಿಂದ ಬೆಂಗಾಲ್ ಗೆಲುವಿನ ನಗೆ ಬೀರಿತು.
ಯು ಮುಂಬಾಗೆ ಗೆಲುವಿನ ಸಿಂಚನ;
ಜೈಪುರ ಹಾಗೂ ಬೆಂಗಾಲ್ ನಡುವಿನ ಪಂದ್ಯಕ್ಕೂ ಮೊದಲು ಯು ಮುಂಬಾ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಯು ಮುಂಬಾ 31-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಯು ಮುಂಬಾ ಅಂಕಪಟ್ಟಿಯಲ್ಲ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು.