ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!

Published : Sep 01, 2019, 10:30 AM IST
ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!

ಸಾರಾಂಶ

ಬುಮ್ರಾ ಮಿಂಚಿನ ಹ್ಯಾಟ್ರಿಕ್, ಹನುಮ ವಿಹಾರಿ ಚೊಚ್ಚಲ ಶತಕ ಹಾಗೂ ಇಶಾಂತ್ ಶರ್ಮಾ ಮೊದಲ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಎದುರು ಬಿಗಿ ಹಿಡಿತ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕಿಂಗ್ಸ್ ಟನ್[ಸೆ.01]: ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 87 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದು, ಮೂರಂಕಿ ಮೊತ್ತ ತಲುಪುವುದರೊಳಗಾಗಿ ಆಲೌಟ್ ಆಗುವ ಭೀತಿಗೆ ಸಿಲುಕಿದೆ. ವೇಗಿ ಬುಮ್ರಾ ಹ್ಯಾಟ್ರಿಕ್ ಸಹಿತ ಕೇವಲ 16 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.

KPL ಫೈನಲ್: ಬಳ್ಳಾರಿ ಮಣಿಸಿ ಚಾಂಪಿಯನ್ ಆದ ಹುಬ್ಳಿ ಟೈಗರ್ಸ್!

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹನುಮ ವಿಹಾರಿ ಬಾರಿಸಿದ ಚೊಚ್ಚಲ ಶತಕ[111] ಹಾಗೂ ಇಶಾಂತ್ ಶರ್ಮಾ [57] ಚೊಚ್ಚಲ ಅರ್ಧಶತಕದ ನೆರವಿನಿಂದ 416 ರನ್ ಬಾರಿಸಿ ಆಲೌಟ್ ಆಯಿತು. ಆ್ಯಂಟಿಗ ಟೆಸ್ಟ್ ನಲ್ಲಿ 93 ರನ್ ಬಾರಿಸಿ ಶತಕ ವಂಚಿತರಾಗಿದ್ದ ವಿಹಾರಿ ಕಡೆಗೂ ಶತಕ ಸಿಡಿಸುವಲ್ಲು ಸಫಲರಾಗಿದ್ದಾರೆ. ವಿಂಡೀಸ್ ಪರ ಹೋಲ್ಡರ್ 105 ನೀಡಿ 5 ವಿಕೆಟ್ ಪಡೆದರು. ಇನ್ನು ದೈತ್ಯ ಕ್ರಿಕೆಟಿಗ ರಾಕೀಂ ಕಾರ್ನ್’ವೆಲ್ 3 ವಿಕೆಟ್ ಪಡೆದು ಮಿಂಚಿದರು.

ಹನುಮಾ ವಿಹಾರಿ ಅಬ್ಬರ, ಬೃಹತ್ ಮೊತ್ತದತ್ತ ಭಾರತ!

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್’ಗೆ ವೇಗಿ ಬುಮ್ರಾ ಆಘಾತ ನೀಡಿದರು. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಬುಮ್ರಾ, ಎರಡನೇ ಟೆಸ್ಟ್ ಪಂದ್ಯದಲ್ಲೂ ಕೆರಿಬಿಯನ್ನರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದರು. ವಿಂಡೀಸ್’ನ ಐವರು ಅಗ್ರಕ್ರಮಾಂಕದ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು.
ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್[34] ಹಾಗೂ ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ವೆಸ್ಟ್ ಇಂಡೀಸ್ ತಂಡ ಇನ್ನೂ 329 ರನ್’ಗಳ ಹಿನ್ನಡೆಯಲ್ಲಿದ್ದು, ಇನಿಂಗ್ಸ್ ಸೋಲು ಕಂಡರೂ ಅಚ್ಚರಿಯಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾಮರ್ ಹ್ಯಾಮಿಲ್ಟನ್[2] ಹಾಗೂ ರಾಕೀಂ ಕಾರ್ನ್’ವೆಲ್[4] ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  

ಹ್ಯಾಟ್ರಿಕ್ ಸಾಧನೆ: ಕೇವಲ 12ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬುಮ್ರಾ, ಹ್ಯಾಟ್ರಿಕ್ ವಿಕೆಟ್ ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಟೆಸ್ಟ್ ಬೌಲರ್ ಎನ್ನುವ ಅಪರೂಪದ ದಾಖಲೆ ಬರೆದರು. 9ನೇ ಓವರ್’ನಲ್ಲಿ ಡ್ಯಾರನ್ ಬ್ರಾವೋ, ಶಮರ್ಥ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅವರನ್ನು ಬಲಿ ಪಡೆದರು. ಈ ಮೂಲಕ ಹರ್ಭಜನ್ ಸಿಂಗ್[ಆಸ್ಟ್ರೇಲಿಯಾ] ಹಾಗೂ ಇರ್ಫಾನ್ ಪಠಾನ್ ಸಾಲಿಗೆ ಬುಮ್ರಾ ಸೇರ್ಪಡೆಗೊಂಡರು.    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Vaibhav Suryavanshi: ಆಟಕ್ಕೆ ಬ್ರೇಕ್ ಹಾಕಲು ದಿಗ್ಗಜ ಕೋಚ್ ಪ್ಲಾನ್: ಆತನ ಮೇಲೆ ಪ್ರೆಶರ್ ಹಾಕಬೇಕು ಎಂದ ಖ್ಯಾತ ತರಬೇತುದಾರ!
ವಿಶ್ವಕಪ್ ಗೆಲ್ಲಿಸಿದ್ದ ಹೀರೋ; ಸ್ಯಾಮ್ಸನ್, ಅಕ್ಷರ್‌ಗೆ ನಾಯಕನಾಗಿದ್ದರೂ ಭಾರತ ತಂಡದ ಬಾಗಿಲು ತೆರೆಯಲೇ ಇಲ್ಲ!