ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪುತ್ತಿದೆ. ಹನುಮಾ ವಿಹಾರಿ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.
ಕಿಂಗ್ಸ್‌ಸ್ಟನ್(ಆ.31): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಹನುಮಾ ವಿಹಾರಿ ಏಕಾಂಗಿ ಹೋರಾಟದಿಂದ ದ್ವಿತಿಯ ದಿನದಾಟದಲ್ಲೂ ಭಾರತ ಅಬ್ಬರಿಸಿತು. ಭೋಜನ ವಿರಾಮದ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 336 ರನ್ ಸಿಡಿಸಿದೆ.
ಇದನ್ನೂ ಓದಿ: ದೈತ್ಯ ಕ್ರಿಕೆಟಿಗ ಕಾರ್ನ್‌ವೆಲ್ ಟೆಸ್ಟ್‌ಗೆ ಪದಾರ್ಪಣೆ
ಭಾರತ ಮೊದಲ 5 ವಿಕೆಟ್ ನಷ್ಟಕ್ಕೆ 264 ರನ್‌ಗಳೊಂದಿಗೆ 2ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಮುಂದುವರಿಸಿತು. ಹನುಮ ವಿಹಾರಿ 42 ಹಾಗೂ ರಿಷಭ್ ಪಂತ್ 27 ರನ್‌ಗಳೊಂದಿಗೆ ಮೊದಲ ದಿನದಾಟ ಅಂತ್ಯಗೊಳಿಸಿದ್ದರು. ಎರಡನೇ ದಿನದಲ್ಲಿ ವಿಹಾರಿ ಹೋರಾಟ ನೀಡಿದರೆ, ಪಂತ್ 1 ರನ್ ಗಳಿಸದೇ ಹೊರನಡೆದರು. ಹನುಮಾ ವಿಹಾರಿಗೆ ಕೆಲ ಹೊತ್ತು ರವೀಂದ್ರ ಜಡೇಜಾ ಸಾಥ್ ನೀಡಿದರು.
ಜಡೇಜಾ 16 ರನ್ ಸಿಡಿಸಿ ಔಟಾದರು. ಆದರೆ ವಿಹಾರಿ ಹಾಫ್ ಸೆಂಚುರಿ ಸಿಡಿಸಿದರು. ಲಂಚ್ ಬ್ರೇಕ್ ವೇಳೆ ವಿಹಾರಿ ಅಜೇಯ 84 ರನ್ ಸಿಡಿಸಿದರೆ, ಇಶಾಂತ್ ಶರ್ಮಾ ಅಜೇಯ 11 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡರು. ಈ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 336 ರನ್ ಸಿಡಿಸಿತು.